`ವಾರಿಸು’ ಸಕ್ಸಸ್ ಖುಷಿಯಲ್ಲಿರುವ ವಿಜಯ್ ಮತ್ತೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಪತ್ನಿ ಸಂಗೀತಾಗೆ ಡಿವೋರ್ಸ್ ಕೊಟ್ಟ ಮೇಲೆ ನಟಿ ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.
ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ನಟ ವಿಜಯ್ ದಾಂಪತ್ಯದಲ್ಲಿ ಬಿರುಕಾಗಿದೆ. ಪತ್ನಿ ಸಂಗೀತಾ ಮತ್ತು ವಿಜಯ್ ನಡುವೆ ಹೊಂದಾಣಿಕೆ ಇಲ್ಲ. 22 ವರ್ಷಗಳ ಪ್ರೀತಿಗೆ ಬ್ರೇಕ್ ಬೀಳಲಿದೆ. ಈ ಜೋಡಿ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಜಯ್ `ಭೈರವ’ ಮತ್ತು `ಸರ್ಕಾರ್’ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಇದೀಗ ಪ್ರೀತಿಗೆ ತಿರುಗಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡೈವೋರ್ಸ್ ಬಗ್ಗೆ ಸುದ್ದಿಯಾಗುತ್ತಿದ್ದರೂ ವಿಜಯ್ ದಂಪತಿ ಇದುವರೆಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
___
Be the first to comment