ನಟ, ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಚೆನ್ನೈಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ ಜೊತೆಗೆ ಹಾಜರಾಗಿ ಸುದ್ದಿ ಮಾಡಿದ್ದಾರೆ.
ಚಿತ್ರ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ – ಮೀನಾಕ್ಷಿ ಸುರೇಶ್ ಅವರ ಮಗನ ಮದುವೆ ಸಮಾರಂಭಕ್ಕೆ ಇಬ್ಬರೂ ಒಟ್ಟಿಗೆ ಆಗಮಿಸಿದ್ದು ಅತಿಥಿಗಳು ಮತ್ತು ಅಭಿಮಾನಿಗಳ ಗಮನ ಸೆಳೆಯಿತು. ಅಲ್ಲಿದ್ದ ಅಷ್ಟೂ ಜನರು ಇಬ್ಬರನ್ನೂ ಅಚ್ಚರಿಯಿಂದ ನೋಡಿ ಫೋಟೋ-ವಿಡಿಯೊ ತೆಗೆಯಲು ಆರಂಭಿಸಿದರು.
ವಿಜಯ್ ಸಾಂಪ್ರದಾಯಿಕ ಕ್ರೀಮ್ ಬಣ್ಣದ ಶರ್ಟ್ ಮತ್ತು ಧೋತಿ ಧರಿಸಿ ಹೂಗುಚ್ಛ ಹಿಡಿದು ಕಾರ್ಯಕ್ರಮಕ್ಕೆ ಬಂದರು. ಅವರ ಜೊತೆಯೇ ನಟಿ ತ್ರಿಷಾ ಕ್ರೀಮ್ ಬಣ್ಣದ ಸೀರೆ ಧರಿಸಿ ಬಂದರು. ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾ ತುಂಬ ಇಬ್ಬರ ಫೋಟೋ-ವಿಡಿಯೊ ವೈರಲ್ ಆಗಿ ಸೆನ್ಸೇಷನ್ ಹುಟ್ಟಿಸಿದೆ.
ವಿಜಯ್ ಅವರ ಪತ್ನಿ ಸಂಗೀತ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನ ಅರ್ಜಿಯಲ್ಲಿ 2021ರಿಂದ ವಿಜಯ್ ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಮಾನಸಿಕ ಹಿಂಸೆ, ನಿರ್ಲಕ್ಷ್ಯ ವರ್ತನೆಯಿಂದ ತಾನು ಹಾಗೂ ತಮ್ಮ ಮಕ್ಕಳಿಗೆ ಮಾನಸಿಕ ವೇದನೆ ಮತ್ತು ಅವಮಾನ ಉಂಟಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಿಜಯ್ ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು,ವಿದೇಶ ಪ್ರವಾಸಗಳಿಗೆ ಹೋಗುವುದನ್ನು ಮುಂದುವರಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಆ ನಟಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯ್ ಅವರ ಜೊತೆಗಿನ ಚಿತ್ರಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರೂ, ವಿಜಯ್ ಅದನ್ನು ನಿರಾಕರಿಸಿಲ್ಲ ಅಥವಾ ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ.
—-





Be the first to comment