ಮದುವೆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ‘ವಿರೋಶ್’

ಉದಯಪುರದಲ್ಲಿ ನಿನ್ನೆ ನಡೆದ ವಿವಾಹದ ನಂತರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ  ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ನವವಿವಾಹಿತ ದಂಪತಿ ಉದಯಪುರದ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಕೈಹಿಡಿದು ನಡೆದಿದ್ದಾರೆ. ರಶ್ಮಿಕಾ ಕೆಂಪು ಚೂಡಿದಾರ್ ಧರಿಸಿದ್ದರೆ, ವಿಜಯ್ ದೇವರಕೊಂಡ ತಿಳಿ ನೀಲಿ ಕುರ್ತಾ-ಪೈಜಾಮಾದಲ್ಲಿದ್ದರು. ಈ ಜೋಡಿಯ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಒಟ್ಟಿಗೆ ಕೈಹಿಡಿದು ನಡೆದ ‘ವಿರೋಶ್’ ದಂಪತಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಹೋಗುವ ಮೊದಲು ಛಾಯಾಗ್ರಾಹಕರು ಮತ್ತು ಅಭಿಮಾನಿಗಳಿಗೆ ಕೈ ಬೀಸಿ  ಪ್ಲೇಯಿಂಗ್ ಕಿಸ್ ಮಾಡುವುದು ವಿಡಿಯೋದಲ್ಲಿದೆ.

ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್ ನಲ್ಲಿ ನಿನ್ನೆ ನಡೆದ ವಿವಾಹದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು.  ಚಿತ್ರನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ, ನಟಿ ಕಲ್ಯಾಣಿ ಪ್ರಿಯದರ್ಶನ್, ಆಶಿಕಾ ರಂಗನಾಥ್ ಮತ್ತಿತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ತೆಲುಗಿನ ಆಂಧ್ರ ಸಂಪ್ರದಾಯ, ಕೊಡವ ಪದ್ದತಿಯಂತೆ ವಿವಾಹ ನೆರವೇರಿದೆ.

ಮಾರ್ಚ್ 4 ರಂದು ದಂಪತಿ  ಆರತಕ್ಷತೆ ಸಮಾರಂಭ ಆಯೋಜಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!