ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಬಹುನಿರೀಕ್ಷಿತ ಪ್ರಾಜೆಕ್ಟ್ 2026ರ ಜನವರಿ 9 ರಂದು ತೆರೆಗೆ ಬರಲಿದ್ದು,ದಳಪತಿ ವಿಜಯ್ ಕೊನೆಯ ಸಿನಿಮಾ ಜೊತೆ ಸಮರ ನಡೆಯಲಿದೆ.
ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ಚಿತ್ರ 2026ರ ಜನವರಿ9ರಂದು ತೆರೆಗೆ ಬರಲಿದ್ದು ದಳಪತಿ ವಿಜಯ್, ಜೂನಿಯರ್ ಎನ್ ಟಿಆರ್ ಸಿನಿಮಾ ಜೊತೆ ಬಾಕ್ಸ್ ಆಫೀಸ್ನಲ್ಲಿ ಕಾದಾಟ ನಡೆಯಲಿದೆ.
ಶೂಟಿಂಗ್ ಹಂತದಲ್ಲಿರುವ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಬಹುನಿರೀಕ್ಷಿತ ಚಿತ್ರ, ನಂದಮೂರಿ ಕಲ್ಯಾಣ್ ರಾಮ್ ಅವರ ಎನ್ ಟಿಆರ್ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ. ಕನ್ನಡತಿ ರುಕ್ಮಿಣಿ ವಸಂತ ಜೂನಿಯರ್ ಎನ್ ಟಿಆರ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ.
ಚಿತ್ರಕ್ಕೆ ಡ್ರ್ಯಾಗನ್ ಎಂಬ ಶೀರ್ಷಿಕೆ ಫೈನಲ್ ಆಗಿದೆ ಎನ್ನಲಾಗಿದೆ. ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೃತಿಕ್ ರೋಷನ್ ವಾರ್ ಶೂಟಿಂಗ್ ಜೊತೆ ನೀಲ್ ಸಿನಿಮಾದ ಚಿತ್ರೀಕರಣದಲ್ಲಿ ಯಂಗ್ ಟೈಗರ್ ಭಾಗಿಯಾಗಲಿದ್ದಾರೆ.
ವಿಜಯ್ ಅವರ ಕೊನೆಯ ಸಿನಿಮಾ ‘ಜನನಾಯಗನ್’ ಬಗ್ಗೆ ದೊಡ್ಡ ಮಟ್ಟದ ಕ್ರೇಜ್ ಶುರುವಾಗಿದೆ. ಈ ಚಿತ್ರ ನೋಡಲು ವೀಕ್ಷಕರು ದೊಡ್ಡ ಮಟ್ಟದಲ್ಲಿ ಬರುವ ಸಾಧ್ಯತೆಗಳಿವೆ.
—-

Be the first to comment