ಡಾಲಿ ಧನಂಜಯ್ ಪತ್ನಿ ಧನತ್ಯಾ, ‘ವಿದ್ಯಾಪತಿ’ ಸಿನಿಮಾದ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ.
ಧನಂಜಯ್ ಪತ್ನಿ ಧನತ್ಯಾ ಜೊತೆ ಮೊದಲ ಬಾರಿಗೆ ಅರಸೀಕೆರೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಇದೇ ವೇಳೆ ಅವರು ಡಾಲಿ ಪಿಕ್ಚರ್ಸ್ ನ ‘ವಿದ್ಯಾಪತಿ’ ಸಿನಿಮಾದ ಪೋಸ್ಟರ್ ಹಿಡಿದು ಪ್ರಚಾರ ಮಾಡಿದ್ದಾರೆ. ಏಪ್ರಿಲ್ 10ಕ್ಕೆ ವಿದ್ಯಾಪತಿ ತೆರೆಗೆ ಬರುತ್ತಿದೆ.
ಡಾಲಿ ಧನಂಜಯ್, ಧನ್ಯತಾ ಹಾಗೂ ಇಡೀ ಕುಟುಂಬ ಇಂದು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಬಿಸಿಲು ಇರೋದ್ರಿಂದ ಡಾಲಿ ನೆರಳಿದ್ದ ಕಲ್ಲಿನ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ.
ಈ ಹಿಂದೆ ಟಗರು ಪಲ್ಯ ಮೂಲಕ ಮೋಡಿ ಮಾಡಿದ್ದ ಧನು-ನಾಗಭೂಷಣ್ ವಿದ್ಯಾಪತಿಗಾಗಿ ಮತ್ತೆ ಕೈ ಜೋಡಿಸಿದ್ದಾರೆ. ಪ್ರೇಕ್ಷಕರಿಗೆ ಕಾಮಿಡಿ ಕಿಕ್ ಕೊಡ್ತಿದ್ದ ನಾಗಭೂಷಣ್ ವಿದ್ಯಾಪತಿಯಲ್ಲಿ ಆಕ್ಷನ್ ಸ್ಟಾರ್ ಆಗಿ ಬದಲಾಗಿದ್ದಾರೆ. ಕರಾಟೆ ಕಿಂಗ್ ಗೆಟಪ್ ನಲ್ಲಿ ನಾಗಭೂಷಣ್ ಕಾಣಿಸಿಕೊಂಡಿದ್ದಾರೆ.
ವಿದ್ಯಾಪತಿ’ ಚಿತ್ರಕ್ಕೆ ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನ ಮಾಡಿದ್ದಾರೆ. ಕಥೆ ಬರೆದು, ಸಂಕಲನವನ್ನೂ ಅವರೇ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ವಿದ್ಯಾ ಪಾತ್ರದಲ್ಲಿ ಮಲೈಕಾ ವಸುಪಾಲ್ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪಾತ್ರ ವಿಶೇಷವಾಗಿದೆ.
ಧನಂಜಯ್ ಅಣ್ಣ ಫ್ರಮ್ ಮೆಕ್ಸಿಕೋ, ಜಿಂಗೋ , ಉತ್ತರಕಾಂಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
—-

Be the first to comment