ಚಿತ್ರ: ವಿದ್ಯಾಪತಿ
ನಿರ್ದೇಶನ: ಹಸೀನ್ ಖಾನ್ – ಇಶಾಮ್ ಖಾನ್
ನಿರ್ಮಾಣ: ಡಾಲಿ ಪಿಕ್ಚರ್ಸ್
ತಾರಾ ಬಳಗ: ನಾಗಭೂಷಣ್, ಮಲೈಕಾ ವಾಸುಪಾಲ್, ಧನಂಜಯ್, ಗರುಡ ರಾಮ್ ಇತರರು
ರೇಟಿಂಗ್ : 3.5/5
ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಓಡಿ ಹೋಗಬಾರದು. ಅದನ್ನು ಎದುರಿಸಬೇಕು ಎಂದು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ವಿದ್ಯಾಪತಿ.
ಬಡ ಹುಡುಗನ ಪಾತ್ರಧಾರಿ ನಾಗಭೂಷಣ್, ಸೂಪರ್ ಸ್ಟಾರ್ ವಿದ್ಯಾ ( ಮಲೈಕಾ ವಾಸುಪಾಲ್ ) ಳನ್ನು ಸುಳ್ಳು ಹೇಳಿ ಪ್ರೀತಿ ಮಾಡುತ್ತಾನೆ. ಅವಳು ಮುಂದೆ ಮದುವೆ ಆದಾಗ ಸಮಸ್ಯೆ ಆರಂಭ ಆಗುತ್ತದೆ. ವಿದ್ಯಾಳ ಪತಿ ಕುಟುಂಬ, ಗೆಳೆಯರನ್ನು ತೊರೆಯುತ್ತಾನೆ. ಅವನ ಮುಖವಾಡ ಕಳಚಿ ಬಿದ್ದಾಗ ವಿದ್ಯಾಪತಿ ಕಥೆ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ನಾಗಭೂಷಣ್ ಅವರು ತಮ್ಮ ನಟನೆಯ ಮೂಲಕ ಮೆಚ್ಚುಗೆ ಪಡೆಯುತ್ತಾರೆ. ಕಾಮಿಡಿ ಜೊತೆಗೆ ಅಕ್ಷನ್ ಮೂಲಕ ಗಮನ ಸೆಳೆಯುತ್ತಾರೆ. ಮಲೈಕಾಗೆ ಸ್ಕ್ರೀನ್ ಸ್ಪೇಸ್ ಅಷ್ಟು ಸಿಕ್ಕಿಲ್ಲ. ಗರುಡ ರಾಮ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಧನಂಜಯ ಅವರು ಚಿತ್ರದ ಕೊನೆಯಲ್ಲಿ ಬಂದು ಗಮನ ಸೆಳೆಯುತ್ತಾರೆ.
ನಿರ್ದೇಶಕರು ಚಿತ್ರದಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೋರಾಟ ಮುಖ್ಯ ಎನ್ನುವ ಸಂದೇಶವನ್ನು ನೀಡುವ ಯತ್ನವನ್ನು ಮಾಡಿದ್ದಾರೆ. ಚಿತ್ರದ ನಿರೂಪಣೆ ಸ್ವಲ್ಪ ಬಿಗಿಯಾಗಿದ್ದರೆ ಇನ್ನಷ್ಟು ಪರಿಣಾಮಕಾರಿ ಆಗಿರುತ್ತಿತ್ತು. ಕೆಲವೊಂದು ನ್ಯೂನತೆ ಇದ್ದರೂ ಒಟ್ಟಾರೆ ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಗಳಿಗೆ ಇಷ್ಟವಾಗಬಹುದು.
___

Be the first to comment