ಡಾಲಿ ಧನಂಜಯ್ ನಿರ್ಮಿಸಿರುವ ‘ವಿದ್ಯಾಪತಿ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ.
ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿಬಂದಿದ್ದ ವಿದ್ಯಾಪತಿ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡಿರುವ ನಾಲ್ಕನೇ ಚಿತ್ರ ಇದಾಗಿದೆ.
ಈ ಚಿತ್ರದಲ್ಲಿ ಡಾಲಿ ಅವರ ಗೆಳೆಯ ನಾಗಭೂಷಣ್ ಹೀರೋ ಆಗಿ ನಟಿಸಿದ್ದಾರೆ. ಉಪಾಧ್ಯಕ್ಷ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ ಆಗಿದ್ದಾರೆ. ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ವಿದ್ಯಾಪತಿ’ ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿತ್ತು.
ಸಿನಿಮಾ ದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕಥೆ ಬರೆದು, ಸಂಕಲನ ಇಶಾಂ ಹಾಗೂ ಹಸೀಂ ಖಾನ್ ಅವರು ಮಾಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಅವರ ಸಾಹಿತ್ಯ, ಅರ್ಜುನ್ ಮಾಸ್ಟರ್ ಅವರು ಸಾಹಸ ನಿರ್ದೇಶನ ‘ವಿದ್ಯಾಪತಿ’ ಚಿತ್ರಕ್ಕಿದೆ.
—-

Be the first to comment