ಸ್ಯಾಂಡಲ್‍ವುಡ್‍ನಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕೆಂಬ ಆಸೆಯನ್ನು ಹೊತ್ತುಕೊಂಡು ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ತಮ್ಮ ಕನಸಿನ ಮೊದಲ ಹೆಜ್ಜೆಯನ್ನಿಟ್ಟುತ್ತಾರೆ, ಆಗ ಇದೇ ಹಾದಿಯಲ್ಲಿರುವ ಅನೇಕ ಯುವ ಪ್ರತಿಭೆಗಳು 27 ನಿಮಿಷಗಳ ಅವಧಿಯ ವಿಧಾತೃ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ.
ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಅವರು ಅಪ್ಪನ ಕುರಿತಾದ ಹಾಡು ಈ ಕಿರುಚಿತ್ರದ ಹೈಲೈಟ್ ಆಗಿದೆ. ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಅವರು ಈ ಚಿತ್ರದ ನಿರ್ದೇಶಕರಾಗಿದ್ದರೆ, ವಿಶ್ವ ಕೌಂಡಿನ್ಯ ಛಾಯಾಗ್ರಹಣ, ಪ್ರಕಾಶ್ ಸಂಕಲನ ಈ ಕಿರುಚಿತ್ರಕ್ಕಿದೆ.
ಈ ಕಿರುಚಿತ್ರದಲ್ಲಿ ಯುವಕನೊಬ್ಬ ನಿರ್ದೇಶಕನಾಗುವ ಹಂಬಲದಿಂದ ಎಲ್ಲರನ್ನು ಎದುರು ಹಾಕಿಕೊಂಡು ಕೊನೆಯಲ್ಲಿ ಅಂದುಕೊಂಡಿದ್ದನ್ನು ಸಾಧಿಸುವುದು ಒಂದು ಎಳೆಯಾಗಿದೆ. ಜೊತೆಗೆ ಸನ್ನಿವೇಶದಲ್ಲಿ ತಂದೆ-ಮಗನ ಬಾಂದವ್ಯವನ್ನು ತೋರಿಸಲಾಗಿದೆ. ಜನುಮದಜೋಡಿ ಧಾರವಾಹಿ ನಾಯಕ ವಿವೇಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ತಂಗಿಯಾಗಿ ನಿಸರ್ಗ, ನಾಯಕಿ ತೇಜಸ್ವಿನಿರಮೇಶ್, ಈಕೆಯ ತಂದೆಯಾಗಿ ಗಿರೀಶ್, ಮಗನ ಆಸೆಗೆ ನೆರೆವಾಗುವ ನಾಗೇಂದ್ರಷಾ ಮುಂತಾದವರ ನಟನೆ ಇದೆ. ಚೂರಿಕಟ್ಟೆ ನಿರ್ದೇಶಕ ರಾಘುಶಿವಮೊಗ್ಗ ಜನವರಿ ಒಂದರಂದು ಚಿತ್ರವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ.
Pingback: cloud testing tools open source