ಬಿಗ್ ಬಾಸ್ ಕನ್ನಡ ಸೀಸನ್ ಗೆ ಮತ್ತೆ ಕಳಿಸಿ ಎಂದು ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಲಾಂಚ್ ಆಗಲು ಎರಡೇ ದಿನ ಬಾಕಿ ಉಳಿದಿದೆ. ಬಿಗ್ ಬಾಸ್ ಸೀಸನ್2ರ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್, ಕಿಚ್ಚ ಸುದೀಪ್ ಅವರಿಗೆ ಚಾನ್ಸ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಹುಚ್ಚ ವೆಂಕಟ್ ವಿಡಿಯೋದಲ್ಲಿ ‘ಕಲರ್ಸ್ ಕನ್ನಡ ಹಾಗೂ ಕಿಚ್ಚ ಸುದೀಪ್ ಅವರಿಗೆ ಈ ವಿಡಿಯೋ. ನನಗೆ ಬಿಗ್ ಬಾಸ್‌ಗೆ ಬರುವುದಕ್ಕೆ ಒಂದು ಚಾನ್ಸ್ ಕೊಡಿ. ಯಾವುದೇ ತರಹದ ಗಲಾಟೆ ನಾನು ಮಾಡಲ್ಲ. ನಾನು ಎಲ್ಲ ಟಾಸ್ಕ್‌ಗಳನ್ನೂ ಮಾಡ್ತಿನಿ. ಒಂದು ಅವಕಾಶ ಕೊಡಿ. ಬಿಗ್ ಬಾಸ್ ಒಂದು ದಿನಕ್ಕೆ ಕರೆದರೂ ಬರ್ತೀನಿ. ಒಂದು ವಾರ ಕರೆದರೂ ಬರ್ತೀನಿ. ಫುಲ್ ಇರೋದಕ್ಕೆ ಕರೆದರೂ ಬರ್ತೀನಿ. ಫಿನಾಲೆಗೆ ಕರೆದರೂ ಬರ್ತೀನಿ. ಒಟ್ಟಿನಲ್ಲಿ ನನ್ನ ಕರೀರಿ. ಯಾಕಂದರೆ ಎಲ್ಲರೂ ಈಗ ನನ್ನ ಬಿಗ್ ಬಾಸ್ ಹುಚ್ಚ ವೆಂಕಟ್ ಅಂತ ಕರೀತಾರೆ. ಬಿಗ್ ಬಾಸ್ ಈಗ ಬರ್ತಾ ಇದೆ. ಎಲ್ಲ ನನ್ನನ್ನು ನೀವು ಹೋಗಲ್ವಾ ಅಂತ ಕೇಳ್ತಾರೆ. ಒಂದು ಅವಕಾಶ ಕೊಡಿ ನಾನು ಯಾವುದೇ ತರಹದ ಗಲಾಟೆ ಮಾಡಲ್ಲ. ಸುದೀಪ್ ಅವರಿಗೆ ನನ್ನ ರಿಕ್ವೆಸ್ಟ್ ಇದು. ನೀವು ಮನಸ್ಸು ಮಾಡಿದ್ರೆ ಆಗತ್ತೆ’ ಎಂದು ಮನವಿ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 2ರಲ್ಲಿ ಹುಚ್ಚ ವೆಂಕಟ್ ಸ್ಪರ್ಧಿಯಾಗಿದ್ದರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆರಳಿದ ಹುಚ್ಚ ವೆಂಕಟ್ ಇನ್ನೊಬ್ಬ ಸ್ಪರ್ಧಾಳು ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಬಳಿಕ ವೆಂಕಟ್ ಅವರನ್ನು ಸುದೀಪ್ ವಾರ್ನ್ ಮಾಡಿ ಮನೆಯಿಂದ ಆಚೆ ಕಳುಹಿಸಿದ್ದರು. ವೆಂಕಟ್ ಮತ್ತೆ ಚಾನ್ಸ್ ಕೊಡಿ ಎಂದು ಮನವಿ ಮಾಡಿದ್ದಾರೆ.

Be the first to comment