ರಶ್ಮಿಕಾ, ಸಧ್ಯದ ಸನ್ಷೇಶನಲ್ ಸ್ಟಾರ್’ ಎಂಬುದರಲ್ಲಿ ನೋ ಡೌಟ್. ಟಾಲಿವುಡ್‍ನಲ್ಲಿ ಅವಕಾಶವೆಂಬ ಆಕಾಶವನ್ನೇ ಬಾಚಿಕೊಂಡಿರುವ ಈ ಕೊಡಗಿನ ಬೆಡಗಿಯ ನಿರ್ಧಾರದಿಂದ ಒಂದಷ್ಟು ಸ್ಯಾಂಡಲ್‍ವುಡ್‍ನ ಮಂದಿ ಮುನಿಸಿಕೊಂಡದ್ದು ನಿಜ. ಆದರೆ, ರಶ್ಮಿಕಾ ತೆಗೆದುಕೊಂಡಿರುವ ನಿರ್ಧಾರ ಸರಿಯಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಬಿಕಾಸ್, ಕನ್ನಡ ಚಿತ್ರಗಳಿಗಷ್ಟೇ ಜೋತು ಬಿದ್ದು ಇದ್ದ ಗೋಲ್ಡನ್ ಅವಕಾಶವನ್ನು ತಿರಸ್ಕಿರಿಸುವುದರಲ್ಲಿ ಅರ್ಥವಿಲ್ಲ. ಉತ್ತಮ ಸಂಭಾವನೆ, ಬೆಸ್ಟ್ ಪ್ರೊಡಕ್ಷನ್ ಹೌಸ್‍ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ತೆಲುಗು-ತಮಿಳು ಚಿತ್ರಗಳತ್ತ ಮಗ್ಗಲು ಬದಲಿಸಿರುವುದು ಆಕೆಯ ಬದುಕಿನ ಬಹುದೊಡ್ಡ ಟರ್ನಿಂಗ್ ಪಾಯಿಂಟ್ ಆಗಲಿದೆ.
ಕನ್ನಡದಲ್ಲಿ ಒಪ್ಪಿಕೊಂಡಿದ್ದ ಅಷ್ಟೂ ಚಿತ್ರಗಳಿಗೆ ಗುಡ್‍ಬಾಯ್ ಹೇಳಿ, ತೆಲಗು ಚಿತ್ರಗಳಿಗೆ ಸಹಿ ಹಾಕಿರುವ ಗಟ್ಟಿಗಿತ್ತಿ ರಶ್ಮಿಕಾ ಮುಂದೊಂದು ದಿನ ಬಾಲಿವುಡ್‍ಗೆ ಜಿಗಿದು ಅಲ್ಲಿಯೂ `ಸನ್ಷೇಶನಲ್ ಸ್ಟಾರ್’ ಎಂದೆನಿಸಿಕೊಂಡರೆ ಅಚ್ಚರಿಯಿಲ್ಲ. ಎನೀಹೌ.. ದಿಟ್ಟ ನಿರ್ಧಾರಕ್ಕಾಗಿ ರಶ್ಮಿಕಾ ಅವರಿಗೆ `ಬಿಸಿನಿಮಾಸ್’ ಕಡೆಯಿಂದ ಅಭಿನಂದನೆಗಳು.
Be the first to comment