ಯುವ ಪಡೆಗಳು ಸೇರಿಕೊಂಡು ಸಿದ್ಧಪಡಿಸಿ ತೆರೆಗೆ ತಂದು ಪ್ರೇಕ್ಷಕರಿಂದ ಹಾಗೂ ವಿಮರ್ಶಕ ರಿಂದ ಪ್ರಶಂಸೆ ಪಡೆದ ಚಿತ್ರ ಸಪ್ಲಿಮೆಂಟರಿ. ಆ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಿರ್ಮಾಪಕರಾದ ಗುರು ಬಂಡಿ ಹಾಗೂ ನಿರ್ದೇಶಕ ಡಾ. ದೇವರಾಜ್ ಅವರ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಈ ನೂತನ ಚಿತ್ರಕ್ಕೆ “ವೀರಪುತ್ರ” ಎಂಬ ಹೆಸರಿಡಲಾಗಿದ್ದು, ವಿನೂತನ ಕಥಾಹಂದರ ಹೊಂದಿದೆ. ಹೊಸ ಬಗ್ಗೆಯ ಕಥೆಯೊಂದಿಗೆ ಚಿತ್ರತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ.
ಸಪ್ಲಿಮೆಂಟರಿಯಂತಹ ಉತ್ತಮ ಚಿತ್ರ ನೀಡಿರುವ ತೃಪ್ತಿಯಲ್ಲಿರುವ ನಿರ್ಮಾಪಕ ಗುರು ಬಂಡಿ ಹಾಗೂ ನಿರ್ದೇಶಕ ಡಾ.ದೇವರಾಜ್ ಅವರು “ವೀರಪುತ್ರ” ಚಿತ್ರದ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಹಿಡಿಸುವಂತಹ ಕಥೆಯ ಮೂಲಕ ಪ್ರೇಕ್ಷಕರನ್ನು ತಲುಪುವ ಉತ್ಸಾಹದಲ್ಲಿದ್ದಾರೆ.ಗುರು ಬಂಡಿ ಅವರು ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ಧೀರ ಸಾಮ್ರಾಟ್ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಈಗಾಗಲ್ಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಬಿರುಸಿನಿಂದ ಸಾಗಿದೆ.
“ವೀರಪುತ್ರ” ಸಹ ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ಗುರು ಬಂಡಿ ಅವರೆ ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿ ಡಾ. ದೇವರಾಜ್ ಅವರದು. ರಾಘವ್ ಸುಭಾಷ್ ಸಂಗೀತ ನಿರ್ದೇಶನ, ಸುಭಾಷ್ ಬೆಟಗೇರಿ ಸಾಹಿತ್ಯ ಹಾಗೂ ಸಾಗರ್ ಗುಲ್ಬರ್ಗ ನೃತ್ಯ ನಿರ್ದೇಶನ “ವೀರಪುತ್ರ” ಚಿತ್ರಕ್ಕಿದೆ.
ಉಳಿದ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದ್ದು ನಾಯಕ, ನಾಯಕಿ, ಪೋಷಕ ಕಲಾವಿದರ ಪಾತ್ರಗಳಿಗೆ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೊಂದಿಗೆ ಸಂಪರ್ಕದಲಿದ್ದಾರೆ ಇನ್ನೆರೆಡು ವಾರಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Pingback: sexual arousal during breastfeeding