Veeram: “ವೀರಂ”ಚಿತ್ರದ ಸ್ಪೆಷಲ್ ಸಾಂಗ್ ಬಿಡುಗಡೆ

ಏಪ್ರಿಲ್‌ 7 ರಂದು ತೆರೆಗೆ ಬರುತ್ತಿರುವ “ವೀರಂ”ಚಿತ್ರದ ಸ್ಪೆಷಲ್ ಸಾಂಗ್ ಬಿಡುಗಡೆ ಆಗಿದೆ.

 ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ಶೃತಿ, ರಚಿತಾರಾಮ್, ಶಿಷ್ಯ ದೀಪಕ್ ಸೇರಿದಂತೆ ಬಹುದೊಡ್ಡ ತಾರಾಗಣವನ್ನೇ ಹೊಂದಿರುವ ಈ ಚಿತ್ರದ ಮತ್ತೊಂದು ಹಾಡು ಹೋದಳೋ ಬಿಟ್ಟು ಹೋದಳೋ ಬಿಡುಗಡೆಯಾಗಿದೆ.

ನಾಯಕ ತನ್ನ ಹುಡುಗಿಯನ್ನು ನೆನಪಿಸಿಕೊಂಡು ಹಾಡುವ ಈ ಗೀತೆಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅನೂಪ್ ಸೀಳನ್  ಸಂಗೀತ  ಹಾಗೂ ಸುಪ್ರಿಯಾರಾಮ್ ದನಿ ಇದೆ. ಕೆ.ಎಂ. ಶಶಿಧರ್ ಅವರು ತಮ್ಮ ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಚಿತ್ರ  ಫ್ಯಾಮಿಲಿ ಎಮೋಷನ್, ಲವ್, ಆಕ್ಷನ್, ಥ್ರಿಲ್ಲರ್ ಡ್ರಾಮಾ  ರೀತಿಯ ಎಂಟರ್‌ಟೈನಿಂಗ್ ಅಂಶಗಳನ್ನು ಒಳಗೊಂಡಿದೆ. ಕಳೆದ ವಾರ ಬಿಡುಗಡೆಯಾದ ಟ್ರೈಲರ್ ಹೆಚ್ಚು ವೀಕ್ಷಣೆಯಾಗಿದೆ. ಖದರ್‌ಕುಮಾರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಟಿ ಶೃತಿ, ಅಕ್ಕ ತಮ್ಮನಾಗಿ,  ಶ್ರೀನಗರ ಕಿಟ್ಟಿ ನಾಯಕನ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ.

 ಶ್ರೀನಗರ ಕಿಟ್ಟಿ ಎಲ್ಲರೂ ಸೇರಿ ತುಂಬಾ ಪ್ರೀತಿಯಿಂದ ಮಾಡಿರುವ ಚಿತ್ರವಿದು, ನಾನಿಲ್ಲಿ ಪ್ರಜ್ವಲ್ ಅಣ್ಣನಾಗಿ ಕಾಣಿಸಿಕೊಂಡಿದ್ದು, ಇದು ನನ್ನ ಮನಸಿಗೆ ತುಂಬಾ ಹತ್ತಿರವಾದ ಪಾತ್ರವೂ ಹೌದು ಎಂದಿದ್ದಾರೆ.

ಪ್ರಜ್ವಲ್ ದೇವರಾಜ್, ವೀರಂ ಬರೀ ಹೊಡೆದಾಟ ಬಡಿದಾಟದ ಚಿತ್ರವಲ್ಲ, ಎಮೋಷನ್ಸ್, ಪ್ರೀತಿಗೆ ಸಾಕಷ್ಟು ಅವಕಾಶವಿದೆ. ಫ್ಯಾಮಿಲಿಗೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ತಾರೆ ಎಂದು ಹೇಳುವ ಚಿತ್ರ ಇದಾಗಿದೆ ಎಂದಿದ್ದಾರೆ.

ನಾಯಕಿ ರಚಿತಾರಾಮ್, ನನ್ನ ಪಾತ್ರ ಡೀಸೆಂಟಾಗಿದೆ. ಈ ಥರದ ಪಾತ್ರಗಳನ್ನು ಮಾಡಿದ್ದರೂ ಟೀಮ್ ಹೊಸದು ಎಂದು ಹೇಳಿದ್ದಾರೆ.

ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಹೀಗೆ ಬಹುದೊಡ್ಡ ತಾರಾಗಣ ಚಿತ್ರದ ಲ್ಲಿದೆ.

ಅನೂಪ ಸೀಳನ್ ಅವರ ಸಂಗೀತ ಸಂಯೋಜನೆ, ಲವಿತ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!