ಚಿತ್ರ: ವೀರ ಚಂದ್ರಹಾಸ
ನಿರ್ದೇಶನ : ರವಿ ಬಸ್ರೂರ್
ತಾರಾ ಬಳಗ: ಶಿವ ರಾಜ್ ಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಶಿಥಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ ಮಂದಾರ್ತಿ ಇತರರು
ರೇಟಿಂಗ್: 4/5
ಯಕ್ಷಗಾನವನ್ನು ಬೆಳ್ಳಿ ಪರದೆಯ ಮೇಲೆ ಸಮರ್ಥವಾಗಿ ಈ ವಾರ ತಂದಿರುವ ಚಿತ್ರ ‘ ವೀರ ಚಂದ್ರಹಾಸ’.
ಅನಾಥ ಬಾಲಕ ಚಂದ್ರಹಾಸ ಭವಿಷ್ಯದಲ್ಲಿ ರಾಜನಾಗುತ್ತಾನೆ ಎಂದು ಅರಿತ ವಿಚಾರ ಮಂತ್ರಿ ದುಷ್ಟಬುದ್ಧಿ ಅವನನ್ನು ಕೊಲ್ಲಲು ಕಟುಕರಿಗೆ ಹೇಳುತ್ತಾನೆ. ಆದರೆ ಚಂದ್ರಹಾಸ ಸಾಯುವುದಿಲ್ಲ. ರಾಜ ಕುಟುಂಬದಲ್ಲಿ ಬೆಳೆದು ಅವನು ಮುಂದೆ ದುಷ್ಟ ಬುದ್ದಿಗೆ ಎದುರಾಗುತ್ತಾನೆ. ದುಷ್ಟಬುದ್ಧಿ ಮುಂದೇನು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.
ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ಕೈಗೆತ್ತಿಕೊಂಡು ರವಿ ಬಸ್ರೂರು ಯಕ್ಷಗಾನಕ್ಕೆ ಸಿನಿಮಾ ರೂಪವನ್ನು ನೀಡಿದ್ದಾರೆ. ಕಲಾವಿದರೆಲ್ಲರೂ ಯಕ್ಷಗಾನದ ಶೈಲಿಯಲ್ಲಿ ಮಾತನಾಡಿದ್ದಾರೆ. ಯಕ್ಷಗಾನದ ವೇಷಭೂಷಣ ಹಾಕಿದ್ದಾರೆ. ಈ ಮೂಲಕ ನಿರ್ದೇಶಕರು ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಯತ್ನವನ್ನು ಮಾಡಿದ್ದಾರೆ.
ಕರಾವಳಿ ಭಾಗದ ಗಂಡು ಕಲೆಯಾದ ಯಕ್ಷಗಾನವನ್ನು ಸಿನಿಮಾ ಪ್ರೇಕ್ಷಕರಿಗೆ ತೋರಿಸುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಬೇಕಿದೆ. ಚಂದ್ರಹಾಸನ ಪಾತ್ರದಲ್ಲಿ ಶಿಥಿಲ್ ಶೆಟ್ಟಿ ಉತ್ತಮವಾಗಿ ನಟಿಸಿದ್ದಾರೆ. ದುಷ್ಟ ಬುದ್ದಿಯ ಪಾತ್ರದಲ್ಲಿ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ನಟನೆ ಹೈಲೈಟ್ ಆಗಿ ಮೂಡಿ ಬಂದಿದೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವ ರಾಜ್ ಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ ಅವರಿಗೆ ಹೆಚ್ಚಿನ ಸ್ಕ್ರೀನ್ ಸಿಕ್ಕಿಲ್ಲ.
ಯಕ್ಷಗಾನ ಕಲೆಯನ್ನು ಇಷ್ಟಪಡುವವರಿಗೆ ಈ ಚಿತ್ರ ವಿಭಿನ್ನ ಪ್ರಯತ್ನವಾಗಿ ಇಷ್ಟವಾಗಬಹುದು.

Be the first to comment