ಚಿತ್ರ: ‘ವೇದ’
ನಿರ್ಮಾಣ: ಗೀತಾ ಶಿವರಾಜ್‌ಕುಮಾರ್ ಹಾಗೂ ಜೀ ಸ್ಟುಡಿಯೋಸ್
ನಿರ್ದೇಶನ: ಎ.ಹರ್ಷ
ತಾರಾಗಣ: ಶಿವರಾಜ್ ಕುಮಾರ್, ಅದಿತಿ ಸಾಗರ್, ಗಾನವಿ ಲಕ್ಷ್ಮಣ್, ಉಮಾಶ್ರೀ ಇತರರು.
ರೇಟಿಂಗ್: 3.5/5
Shivarajkumar | Vedha Movie Review:
ಶಿವರಾಜಕುಮಾರ್ ಅವರ 125ನೇ ಸಿನಿಮಾ ‘ವೇದ’ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರ ನಿರೀಕ್ಷೆಗೆ ತಕ್ಕಂತೆ ಮೂಡಿ ಬಂದಿದೆ.
ಅತ್ಯಾಚಾರ ವಿರುದ್ಧ ತಂದೆ ಮತ್ತು ಮಗಳು ಹೋರಾಡುವ ಕಥೆ ಇಲ್ಲಿದೆ. ಜೈಲಿನಿಂದ ಬಿಡುಗಡೆ ಆಗುವ ಟೀನೇಜ್ ಹುಡುಗಿ ಕನಕ, ತಂದೆ ವೇದ ಇಬ್ಬರೂ ಸರಣಿ ಕೊಲೆ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎನ್ನುವುದು ಚಿತ್ರ ನೋಡುತ್ತಾ ಮುಂದೆ ತಿಳಿಯುತ್ತಾ ಹೋಗುತ್ತದೆ.
ನಿರ್ದೇಶಕ ಹರ್ಷ ಸಿನಿಮಾದ ಮೂಲಕ ಅಪರಾಧ ಕಥೆಯನ್ನು ಹೇಳುವ ಯತ್ನವನ್ನು ಮಾಡಿದ್ದಾರೆ. ಚಿತ್ರದ ಮೇಕಿಂಗ್ ಕೆಜಿಎಫ್ ಹೋಲುತ್ತದೆ. ಶಿವಣ್ಣ, ಅದಿತಿ ಕೆಜಿಎಫ್ ಧೂಳಿನಿಂದ ಎದ್ದು ಬಂದ ಜೀತಾಳುಗಳ ಲುಕ್ ನಲ್ಲಿ ಕಾಣಿಸಿದ್ದಾರೆ.
ಶಿವರಾಜ್‌ಕುಮಾರ್ ಅವರು ತಮ್ಮ ಪಾತ್ರಕ್ಕೆ ತಮಿಳಲ್ಲೂ ಡಬ್ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಎನರ್ಜಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಉತ್ಸಾಹದ ಅಜ್ಜಿ ಆಗಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ವೀಣಾ ಪೊನ್ನಪ್ಪ ಪೊಲೀಸ್ ಅಧಿಕಾರಿ ಆಗಿ ಗಮನ ಸೆಳೆಯುತ್ತಾರೆ.
ಅತ್ಯಾಚಾರ ವಿರುದ್ಧ ಹೋರಾಡುವ ಸಾಕಷ್ಟು ಚಿತ್ರಗಳು ಬಂದಿವೆ. ತಂದೆ ಮಗಳು ಜೊತೆಯಾಗಿ ಸೇರಿ ಹೋರಾಟ ನಡೆಸುವ ಭಿನ್ನಕತೆಯಾಗಿ ವೇದ ಗಮನ ಸೆಳೆಯುತ್ತದೆ.
@bcinemas
_______

Be the first to comment