ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಕಲರ್ಸ್ ಕನ್ನಡದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
ವೇದ ಸಿನಿಮಾವನ್ನು ಎ. ಹರ್ಷ ನಿರ್ದೇಶನ ಮಾಡಿದ್ದು, 1960 ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ.
ಶಿವರಾಜ್ ಕುಮಾರ್ ಅವರ ಮೊದಲ ಹೋಂ ಬ್ಯಾನರ್ ಸಿನಿಮಾ ಆಗಿರುವ ವೇದ ಡಿಸೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವೇದ ಸಿನಿಮಾ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವ ಸಿನಿಮಾ ಆಗಿದೆ.
ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ವೇದ ಸಿನಿಮಾ, ಒಟಿಟಿಯಲ್ಲೂ ಮೋಡಿ ಮಾಡಿತ್ತು. 12 ಕೋಟಿಗೂ ಹೆಚ್ಚು ನಿಮಿಷಗಳ ಕಾಲ ವೇದ ಸಿನಿಮಾ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಿತ್ತು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾವಾದ ವೇದದಲ್ಲಿ, ಶಿವರಾಜ್ ಕುಮಾರ್ ಪಾತ್ರದ ಗತ್ತು ಜೋರಾಗಿದೆ. ಮಚ್ಚು ಹಿಡಿದು ಶಿವಣ್ಣ ತಪ್ಪಿತಸ್ಥರ ವಿರುದ್ಧ ಅಬ್ಬರಿಸಿದ್ದಾರೆ.
ಈ ಚಿತ್ರವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
____

Be the first to comment