ತಮನ್ನಾ ಜೊತೆ ವಸಿಷ್ಠಸಿಂಹ ಸಿನಿಮಾ

 ಬಹುಭಾಷಾ ನಟಿ ‘ಮಿಲ್ಕಿ​ ಬ್ಯೂಟಿ’  ತಮನ್ನಾ ಜೊತೆ ನಟ ವಸಿಷ್ಠ ಸಿಂಹ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.

 ‘ಓದೆಲ ರೈಲ್ವೆ ಸ್ಟೇಷನ್’ ‘  ಸಿನಿಮಾದ ಎರಡನೇ ಭಾಗ ಸೆಟ್ಟೇರಿದ್ದು, ಇತ್ತೀಚೆಗೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮುಹೂರ್ತ ನಡೆದಿದೆ. ತಮನ್ನಾ ಹಾಗೂ ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ವಸಿಷ್ಠ ಅವರ ಪತ್ನಿ, ನಟಿ ಹರಿಪ್ರಿಯಾ ಅವರೂ ಈ ಸಿನಿಮಾದಲ್ಲಿ ಇದ್ದಾರೆ.

2022ರಲ್ಲಿ ‘ಓದೆಲ ರೈಲ್ವೆ ಸ್ಟೇಷನ್’  ‘ಆಹಾ’ ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮವಾದ ಪ್ರತಿಕ್ರಿಯೆ ದೊರೆತಿತ್ತು. ಅಶೋಕ್‌ ತೇಜ ಆಕ್ಷನ್‌ ಕಟ್‌ ಹೇಳಿದ್ದ ಈ ಚಿತ್ರದಲ್ಲಿ ವಸಿಷ್ಠ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ‘ಓದೆಲ ರೈಲ್ವೆ ಸ್ಟೇಷನ್’ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಪ್ರೇಕ್ಷಕರಿಗೆ ಪರಿಚಿತವಾಗಿದ್ದರು. ನೈಜ ಘಟನೆ ಆಧಾರಿತ ‘ಓದೆಲ ರೈಲ್ವೆ ಸ್ಟೇಷನ್’ ಮೊದಲ ಭಾಗದಲ್ಲಿ ನಟಿ ಹೆಭಾ ಪಟೇಲ್ ಅಭಿನಯಿಸಿದ್ದರು. ಎರಡನೇ ಭಾಗದಲ್ಲೂ ಹೆಭಾ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಡಿ. ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಸೌಂದರ್ ರಾಜನ್ ಎಸ್. ಛಾಯಾಚಿತ್ರಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!