Kannada Big Boss: ರೀ ಎಂಟ್ರಿ ಕೊಟ್ಟ ವರ್ತೂರು ಸಂತೋಷ್​

ಹುಲಿ ಉಗುರಿನ ಡಾಲರ್​ ಧರಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಕನ್ನಡ ರಿಯಾಲಿಟಿ ಶೋ ಬಿಗ್​ ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ.

ಆದರೆ ಮನೆಯ ಸದಸ್ಯರು ಸಂತೋಷ್‌ ಅವರನ್ನು ಮನೆಯಿಂದ ಹೊರಹೋಗಲು ನಾಮಿನೇಟ್‌ ಮಾಡಿದ್ದಾರೆ. ಒಂದು ವಾರ ಸಂತೋಷ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸ್ಪರ್ಧಿಗಳು ಹಲವು ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮನ್ನು ಸೇಫ್‌ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ವರ್ತೂರ್ ಸಂತೋಷ್ ಇರಲಿಲ್ಲ. ಹಾಗಾಗಿ ಅವರು ಸೇಫ್‌ ಜೋನ್‌ನಲ್ಲಿ ಇರುವುದು ನ್ಯಾಯವಲ್ಲ ಎಂದಿದ್ದಾರೆ. ಸಂತೋಷ್‌ ಅವರನ್ನು ಸಂಗೀತಾ, ವಿನಯ್, ಸ್ನೇಹಿತ್ ಸೇರಿದಂತೆ ಬಹುತೇಕ ಸದಸ್ಯರು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ.

ವರ್ತೂರು ಸಂತೋಷ್ ಅವರನ್ನು ಅ.22ರಂದು ಬಿಗ್​ ಬಾಸ್​ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು. ಅನಿರೀಕ್ಷಿತವಾಗಿ ಮನೆಯಿಂದ ಎಕ್ಸಿಟ್​​ ಆಗಿದ್ದ ಅವರು ಮತ್ತೆ ಬಿಗ್​ ಬಾಸ್​ ಮನೆ ಸೇರಿಕೊಂಡಿದ್ದಾರೆ.

ಸಂತೋಷ್ ಹುಲಿಯ ಉಗುರಿನ ಡಾಲರ್​ ನ್ನು ಧರಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಅವರ ಬಳಿಯಿದ್ದ ಡಾಲರ್ ಜಪ್ತಿ ಮಾಡಿಕೊಂಡಿದ್ದರು.

ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸಂತೋಷ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ 2ನೇ ಎಸಿಜೆಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. 4 ಸಾವಿರ ನಗದು ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ತಿಳಿಸಿ ಜಾಮೀನು ನೀಡಿತ್ತು. ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ಬಂಧನಕ್ಕೊಳಗಾಗಿ 5 ದಿನಗಳ ನಂತರ  ಅವರನ್ನು ಬಿಡುಗಡೆ ಮಾಡಲಾಗಿತ್ತು.

ನನ್ನ‌ ಕಕ್ಷಿದಾರರನ್ನು ವೀರಪ್ಪನ್ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಹುಲಿ ಉಗುರು ಪೆಂಡೆಂಟ್ ಹೊಂದಿರುವ ನಟ, ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ಸಂತೋಷ್ ಬಂಧನಕ್ಕೂ ಮುನ್ನ ಯಾಕೆ ನೋಟಿಸ್ ಜಾರಿ ಮಾಡಿಲ್ಲ? ಕನಿಷ್ಟ ಏಳು ವರ್ಷಗಳ ಸಜಾ ಒಳಪಟ್ಟ ಪ್ರಕರಣದಲ್ಲಿ ಮೊದಲು ಸೂಚನೆ ನೀಡಿ, ನಂತರ ಬಂಧಿಸಬೇಕಿತ್ತು.ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ಸಂತೋಷ್‌ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ ಎಂದು ಸಂತೋಷ್ ಪರ ವಕೀಲ ನಟರಾಜ್  ಪ್ರತಿಕ್ರಿಯಿಸಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!