Varisu ಆನ್ಲೈನ್ ನಲ್ಲಿ ಸಿನಿಮಾ ಲೀಕ್ : ವಾರಿಸುಗೆ ಹಿನ್ನಡೆ

ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಜನವರಿ 11ರಂದು ರಿಲೀಸ್ ಆಗಿದ್ದು, ಸಿನಿಮಾ ರಿಲೀಸ್ ಆದ ದಿನವೇ ಆನ್​ಲೈನ್​ನಲ್ಲಿ ಲೀಕ್ ಆಗಿ ಹಿನ್ನಡೆ ಅನುಭವಿಸಿದೆ.

ಹಲವು ಟೊರೆಂಟೋ ಸೈಟ್​​ಗಳಲ್ಲಿ ವಾರಿಸು ಮೂವಿ ಫುಲ್ ಎಚ್​ಡಿ ಕಾಪಿ ಡೌನ್​ಲೋಡ್​ಗೆ ಲಭ್ಯವಾಗಿದೆ. ಸಿನಿಮಾ ಡೌನ್​ಲೋಡ್​​ಗೆ ಲಭ್ಯವಿದ್ದು ಅಲ್ಲಿ 1080p, 720p, 360p, 240p, HD ಕ್ವಾಲಿಟಿಯಲ್ಲಿ ಲಭ್ಯವಾಗುತ್ತಿದೆ.

ವಾರಿಸು ಸಿನಿಮಾ ಮೂಲಕ ವಿಜಯ್ ಅವರು 2023ರಲ್ಲಿ ಭರ್ಜರಿಯಾಗಿ ಬಿಗ್​ಸ್ಕ್ರೀನ್​ಗೆ ಎಂಟ್ರಿ ಕೊಟ್ಟಿದ್ದಾರೆ. ರಿಲೀಸ್ ಆದ ಮೂರು ದಿನ ಕಳೆದು ಸಿನಿಮಾ ಹಿಂದಿ, ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

ವಾರಿಸು ಚಿತ್ರ ಮೊದಲ ದಿನ 9.6 ಕೋಟಿ ರೂಪಾಯಿ ಗಳಿಸಿಕೊಂಡಿದೆ. ಸಿನಿಮಾ ಈಗ ಆನ್​ಲೈನ್​ನಲ್ಲಿ ಲೀಕ್ ಆಗಿದ್ದು ಟೋಟಲ್ ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಸಿನಿಮಾಗಾಗಿ ವಿಜಯ್ ಅವರು 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!