ವರಮಹಾಲಕ್ಷ್ಮೀ ಹಬ್ಬಕ್ಕೆ ‘ಕೆಂಪೇಗೌಡ 2’ ಬಿಡುಗಡೆ

ಪಂಚಮುಖಿ ಹನುಮಾನ್ ಸಿನಿ  ಲಾಂಛನದಲ್ಲಿ ಎ.ವಿನೋದ್ ಅವರು ನಿರ್ಮಿಸಿರುವ ‘ಕೆಂಪೇಗೌಡ 2’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕೋಮಲ್ ಕುಮಾರ್ ನಾಯಕಾರಾಗಿ ನಟಿಸಿರುವ ಈ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸಿದ್ದಾರೆ. ನಿರ್ದೇಶಕರೆ ಕಥೆ ಬರೆದಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕೆ.ವಿ.ರಾಜು, ಶ್ರೀನಾಥ್ ಎಂ.ಎಸ್ ಹಾಗೂ ನಂಜುಂಡ ಅವರು ಬರೆದಿದ್ದಾರೆ. ಡಿo ಮೋಹನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವರುಣ್ ಉನ್ನಿ ಅವರ ಸಂಗೀತ ನಿರ್ದೇಶನವಿದೆ. ಸಿ.ರವಿಚಂದ್ರ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಅಂಬು ಅರಿವು, ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್ ಕುಮಾರ್, ಶ್ರೀಶಾಂತ್(ಕ್ರಿಕೆಟ್), ಯೋಗಿ(ಲೂಸ್‍ಮಾದ), ರಕ್ಷಿಕ ಶರ್ಮ, ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!