ಗಮನ ಸೆಳೆಯುವ “ವರದ” ಟ್ರೈಲರ್

ವಿನೋದ್ ಪ್ರಭಾಕರ್ ನಟನೆಯ “ವರದ ” ಚಿತ್ರ ಫೆಬ್ರವರಿ 18ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇದರ ಬೆನ್ನಲ್ಲೇ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಆಕ್ಷನ್, ಸೆಂಟಿಮೆಂಟ್ ಮೂಲಕ ಟ್ರೈಲರ್ ಗಮನ ಸೆಳೆಯುತ್ತಿದೆ.

ಈಗಾಗಲೇ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ‘ರಾಬರ್ಟ್’ ಬಳಿಕ ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾ ಬಿಡುಗಡೆಗೆ ಆಗುತ್ತಿರುವುದರಿಂದ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ‌.

‘ವರದ’ ಸಿನಿಮಾದಲ್ಲಿ ಆ್ಯಕ್ಷನ್ ಜೊತೆಗೆ ಅಪ್ಪ-ಮಗನ ನಡುವಿನ ಸೆಂಟಿಮೆಂಟ್ ಇದೆ. ಇದು ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವ ಸಿನಿಮಾ ಎನ್ನುವುದು ಚಿತ್ರತಂಡದ ಅಭಿಪ್ರಾಯ ಆಗಿದೆ.

ಆಟೋರಾಜ, ಕಳ್ಳ ಮಳ್ಳ ಸುಳ್ಳ, ಡಿಕೆ ಸಿನಿಮಾಗಳನ್ನು ನಿರ್ದೇಶಿಸಿದ ಉದಯ ಪ್ರಕಾಶ್ ‘ವರದ’ ಸಿನಿಮಾ ನಿರ್ದೇಶಿಸಿದ್ದಾರೆ. ಜೊತೆಗೆ ಅವರು ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್.

ಚಿತ್ರಕ್ಕೆ ಕೆ.ಕಲ್ಯಾಣ್ , ಚೇತನ್ ಕುಮಾರ್ ಹಾಗೂ ನಂದೀಶ್ ಹಾಡು ಬರೆದಿದ್ದಾರೆ. ಪ್ರದೀಪ್ ವರ್ಮ ಸಂಗೀತ, ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಸಂಕಲನ, ಕಂಬಿ ರಾಜು ಕೊರಿಯೋಗ್ರಫಿ, ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್, ಅಶ್ರಫ್ ಗುರ್ಕಲ್ ಸಾಹಸ ಚಿತ್ರಕ್ಕಿದೆ.

ಹಿರಿಯ ನಟ ಚರಣ್ ರಾಜ್ ಈ ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅಮಿತಾ ನಟಿಸಿದ್ದಾರೆ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ನಟಿಸಿದ್ದಾರೆ.

ರಾಬರ್ಟ್’ ಚಿತ್ರದಿಂದ ವಿನೋದ್ ಪ್ರಭಾಕರ್ ಇಮೇಜ್ ಬದಲಾಗಿದ್ದು, ಹೊಸ ಸಿನಿಮಾ ‘ವರದ’ ಮ್ಯಾಜಿಕ್ ಮಾಡುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರತಂಡವಿದೆ.

ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬದಂದು ವಿಶೇಷ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!