ಜುಲೈ 19ಕ್ಕೆ ‘ವಜ್ರಮುಖಿ’ ಬಿಡುಗಡೆ

ಸಿಗಂದೂರು ದೇವಿ ಕುರಿತಭಕ್ತಿಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿದೆವ್ವದ ಸಿನಿಮಾ ‘ವಜ್ರಮುಖಿ’ಗೆರಚನೆ,ಚಿತ್ರಕತೆ ಬರೆದು ಹಣ ಹೊಡುವಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾರರ್,ಪ್ರೀತಿ ಮತ್ತುತ್ರಿಕೋನಾತ್ಮಕಮಹಿಳಾ ಪ್ರಧಾನಜೊತೆಗೆ ಮರ್ಡರ್ ಮಿಸ್ಟರ್‍ಕತೆಇರುವುದು ವಿಶೇಷವಾಗಿದೆ. ಯಾರಿಂದಯಾರಿಗೆಎಂಬಂತಹಕಾಲ್ಪನಿಕ ಘಟನೆಗಳು ತಿರುವುಕೊಡುತ್ತದೆ. ರೋಡ್‍ರೋಮಿಯೋ ನಂತರಎರಡನೆಇನ್ನಿಂಗ್ಸ್‍ಎನ್ನುವಂತೆಆ್ಯಡ್ ಫಿಲಿಂ ಮೇಕರ್ ಪಾತ್ರಕ್ಕೆನಾಯಕ ದಿಲೀಪ್‍ಪೈ ನಟನೆಇದೆ. ಇವರಿಗೆಜೋಡಿಯಾಗಿ ಸಂಜನಾನಾಯ್ಡು ನಟಿಸಿದ್ದಾರೆ.ನಲವತ್ತೈದು ದಿನಗಳ ಕಾಲ ಮೂರು ಹಂತಗಳಲ್ಲಿ ಸಾಗರ, ಜೋಗ್‍ಜಲಪಾತ, ತಾಳಗುಪ್ಪ ಸುಂದರ ತಾಣಗಳಲ್ಲಿ ಸಂಜೆ 4ರಿಂದ ಮುಂಜಾನೆ ನಾಲ್ಕರವರೆಗೆಚಿತ್ರೀಕರಣ ನಡೆಸಲಾಗಿದೆ. ಸಂಕಲನಮತ್ತುನಿರ್ದೇಶನ ಮಾಡಿರುವುದುಎನ್.ಆದಿತ್ಯಕುಣಿಗಲ್.

ಶೀರ್ಷಿಕೆ ಹೆಸರಿನಲ್ಲಿ ಪ್ರೇಕ್ಷಕರಿಗೆ ಹೆದರಿಸುತ್ತಾರೆ. ಮೋಹಿನಿ,ಕೊಳ್ಳಿದೆವ್ವ, ನಾಗವಲ್ಲಿತರಹಇರುವುದಿಲ್ಲ. ಕಿಚ್ಚು, ಸೇಡು, ಸಿಟ್ಟು ಹಾಗೂ ಭಾವನೆಗಳನ್ನು ತುಂಬಿಕೊಂಡಿರುವ ಪಾತ್ರದಲ್ಲಿ ನೀತೂ ಅಭಿನಯಸಿದ್ದು ಇವರಿಗೆ 35ನೇ ಚಿತ್ರವಾಗಿದೆ. ಹಾರರ್ ಚಿತ್ರಗಳಲ್ಲಿ ನಟಿಸಿದ್ದರೂ, ಮೊದಲಬಾರಿದೆವ್ವ ಆಗಿ ಭಯಂಕರವಾಗಿ ನಗು ಚೆಲ್ಲಿದ್ದಾರಂತೆ. ಮೂರು ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಡಾ.ನಾಗೇಂದ್ರಪ್ರಸಾದ್‍ಟೈಟಲ್ ನೀಡಿದ್ದುಅಲ್ಲದೆ ಸದರಿ ಪಾತ್ರಕ್ಕೆ ನೀತೂ ಹೊಂದಿಕೊಳ್ಳುತ್ತಾರೆಂದು ಶಿಪಾರಸ್ಸು ಮಾಡಿದ್ದರು. ಇವರಿಗಾಗಿಯೇ ‘ಕಾಲ ಚಂಚಲ’ ಹಾಡುಆಗಿರುವುದು ಪ್ಲಸ್ ಪಾಯಿಂಟ್‍ಆಗಿದೆ. ಶೇಕಡ 25 ಭಾಗದಷ್ಟುದೆವ್ವದ ದೃಶ್ಯಗಳು ಬರಲಿದೆ. ಹಿರಿಯಛಾಯಾಗ್ರಾಹಕಪಿ.ಕೆ.ಹೆಚ್.ದಾಸ್‍ಎಲ್ಲರನ್ನುಚೆನ್ನಾಗಿ ತೋರಿಸಿದ್ದಾರೆ.
ಮೂರು ಹಾಡುಗಳಿಗೆ ಸಂಗೀತವನ್ನುರಾಜ್‍ಭಾಸ್ಕರ್ ಒದಗಿಸಿದ್ದಾರೆ.ಸಾಹಸ ಕೌರವವೆಂಕಟೇಶ್, ಸಂಭಾಷಣೆ ವಿನಾಯಕ್‍ರಾಮ್‍ಕಲಗಾರು, ನೃತ್ಯಕಿಂಗ್‍ಕಿಶೋರ್‍ಅವರದಾಗಿದೆ. ನಿರ್ಮಾಪಕರ ಗೆಳಯನ ಪತ್ನಿಡಾ.ಗೀತಾನರೇಂದ್ರನಾಯಕ್ ಸಹ ನಿರ್ಮಾಪಕರಿಯಾಗಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರ ಹಿತೈಷಿ ಹಿರಿಯ ವಿತರಕ,ನಿರ್ಮಾಪಕಎನ್.ಕುಮಾರ್ ಮುಂದಿನ ವಾರ ಬಿಡುಗಡೆ ಮಾಡಲು ಸಹಕಾರ, ಸಲಹೆ ನೀಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!