“ವೈರಮುಡಿ” ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 56 ನೇ ವರ್ಷದ ಹುಟ್ಟು ಹಬ್ಬ, ಹೀಗಾಗಿ ಅನೇಕ ಚಿತ್ರತಂಡದವರು ಅವರಿಗೆ ಬರ್ತಡೇ ಶುಭಾಶಯ ಕೋರುವುದರೊಂದಿಗೆ , ಅವರು ಅಭಿನಯಿಸುತ್ತಿರುವ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಗಳು ಸಹಬಿಡುಗಡೆಗೊಂಡಿವೆ.
ನಿರ್ದೇಶಕ ಯೋಗರಾಜ್ ಭಟ್ ಹಾಗೂ ಶಿವಣ್ಣನ ಕಾಂಭಿನೇಷನ್ನಿನ ಮೊದಲ ಚಿತ್ರದ ಫಸ್ಟ್ ಲುಕ್ ಫೊಸ್ಟ್ರ್ ಹೊರ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಂದ ಮೆಚ್ಚುಗೆ ಗಳಿಸಿದೆ. ಜೊತೆಗೆ ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಕೆ ಪಿ ಪೂರ್ಣಚಂದ್ರ ತೇಜಸ್ವಿ ವಿರಚಿತ “ಜುಗಾರಿ ಕ್ರಾಸ್” ಕಾದಂಬರಿಯನ್ನು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಬಹಳ ವರ್ಷಗಳ ಹಿಂದೆಯೇ ಹರಿದಾಡುತ್ತಿತ್ತು. ಇದೀಗ ಅದರಲ್ಲಿ ನಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದರೊಂದಿಗೆ ದ್ವಾರಕೀಶ್ ಅವರ ನಿರ್ಮಾಣದ ಚಿತ್ರದಲ್ಲೂ ನಟಿಸಲಿದ್ದು, ಈ ಚಿತ್ರವು ಮುಂದಿನ ವರ್ಷ ಸೆಟ್ಟೇರಲಿದೆಯಂತೆ. ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರಂತೆಇದೀಗ ಕವಚ, ದ್ರೋಣ, ರುಸ್ತುಂ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ಶಿವಣ್ಣ, ರಥಾವರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ಚಿತ್ರದಲ್ಲೂ ನಟಿಸಲಿದ್ದಾರೆ. ‘ವೈರಮುಡಿ’ ಎಂಬ ಟೈಟಲ್ ಚಿತ್ರಕ್ಕಿಟ್ಟಿದ್ದು, ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.ಸಧ್ಯ ನಿರ್ದೇಶಕ ಚಂದ್ರಶೇಖರ್ ಅವರು ‘ತಾರಕಾಸುರ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆ ಚಿತ್ರವು ಇದೀಗ ಅಂತಿಮ ಹಂತದಲ್ಲಿದೆ. ಈ ಚಿತ್ರದ ನಂತರ ಶಿವಣ್ಣನ ವೈರಮುಡಿ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಹಿಂದೆ ‘ಬೆತ್ತನಗೆರೆ’ ಚಿತ್ರವನ್ನು ನಿರ್ಮಿಸಿದ್ದ ಬಿ.ಎನ್ ಸ್ವಾಮಿ ಅವರೇ ಬಂಡವಾಳ ಹಾಕಲಿದ್ದಾರೆ.ಇನ್ನು ಶಿವಣ್ಣನಿಗಾಗಿಯೇ ವಿಭಿನ್ನ ಕಥೆಯನ್ನು ಮಾಡಿಕೊಂಡಿರುವ ಚಂದ್ರಶೇಖರ್ ಬಂಡಿಯಪ್ಪ ಅವರು , ಈ ಚಿತ್ರದಲ್ಲಿ ಕಂಬಳದ ಕ್ರೀಡೆಯ ಬಗ್ಗೆ ತೋರಿಸಲಾಗುತ್ತದಂತೆ. ಈ ಹಿಂದೆ ನಂಜುಂಡಿ ಚಿತ್ರದಲ್ಲಿಯೂ ಕಂಬಳದ ಕ್ರೀಡೆಯ ಬಗ್ಗೆ ತೋರಿಸಲಾಗಿತ್ತು.
Be the first to comment