ವಾಘಚಿಪಾಣಿ

ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ವಾಘಚಿಪಾಣಿ’

ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ‘ವಾಘಚಿಪಾಣಿ’ ಚಿತ್ರ 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿರುವ   75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ 5 ಖಂಡಗಳ 30 ಸಿನಿಮಾಗಳಲ್ಲಿ ಕನ್ನಡದ ‘ವಾಘಚಿಪಾಣಿ’  ಮೊದಲ ಸಿನಿಮಾವಾಗಿದೆ.

‘ವಾಘಚಿಪಾಣಿ ಚಿತ್ರಕ್ಕೆ ಅನುರಾಗ್ ಕಶ್ಯಪ್ ನಿರ್ಮಾಪಕರು. ಈ ಕುರಿತು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹೇಳಿಕೆಯಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ‘ವಾಘಚಿಪಾಣಿ’ ಚಿತ್ರ ಭಾರತೀಯ ಭರವಸೆಯ ಸಿನಿಮಾ ಎಂದು ಹೇಳಲಾಗಿದೆ.

‘ಉತ್ತರ ಕನ್ನಡ ಜಿಲ್ಲೆ ಶಿರಸಿಯ ಒಂದು ಹಳ್ಳಿಯಿಂದ ಬಂದಿದ್ದೇನೆ. ಅದು ಗೂಗಲ್ ಮ್ಯಾಪ್‌ನಲ್ಲಿಯೂ  ಪತ್ತೆಹಚ್ಚಲು ಸಾಧ್ಯವಿಲ್ಲ. ಈಗಲೂ ಅಲ್ಲಿಯೇ ವಾಸಿಸುತ್ತಿದ್ದೇನೆ. ಹೀಗಾಗಿ ನನ್ನದೇ ಆದ ಪರಿಸರ ವ್ಯವಸ್ಥೆಯನ್ನು ಚಿತ್ರಕ್ಕೆ ರಚಿಸಿಕೊಳ್ಳಬೇಕಾಯಿತು’ ಎಂದು ನಿರ್ದೇಶಕ ನಟೇಶ್ ಹೆಗ್ಡೆ ತಿಳಿಸಿದ್ದಾರೆ.

‘ವಾಘಚಿಪಾನಿ’ ನಿರ್ದೇಶಕ ನಟೇಶ್ ಹೆಗ್ಡೆಯವರ ಎರಡನೇ ಚಿತ್ರ. ಅವರ ಮೊದಲ  ಚಿತ್ರ ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ  ಮೆಚ್ಚುಗೆ ಪಡೆದಿದೆ. ಇದನ್ನು ನಿರ್ದೇಶಕ, ನಟ ರಿಷಭ್ ಶೆಟ್ಟಿ ನಿರ್ಮಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!