ಚಂದ್ರು ಓಬಯ್ಯ ನಿರ್ದೇಶನದ ಯು ಟರ್ನ್ 2

ಲೂಸಿಯಾ ಪವನ್ ಹಿಟ್ ಸಿನಿಮಾ ಯು ಟರ್ನ್ ಬೇರೆ ಭಾಷೆಗಳಲ್ಲೂ ಸಹ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಕಂಡಿದ್ದು ನಿಮಗೆಲ್ಲಾ ತಿಳಿದಿರೋ ವಿಚಾರ. ಅದೇ ರೀತಿ ಅದೇ ಹೆಸರನ್ನು ತಗೊಂಡು ಯು ಟರ್ನ್ 2 ಎಂಬ ಸಿನಿಮಾ ಮಾಡಲು ಹೊರಟಿದೆ ಹೊಸಬರ ತಂಡ.

ಫಿಜಾ ಹಟ್ ನಲ್ಲಿ ಕೆಲ್ಸ ಮಾಡೋ ಹುಡುಗನಿಗೆ ದೆವ್ವದ ಕಾಟ. ಅದರ ಮಧ್ಯದಲ್ಲಿ ನಡೆಯುವಂತ ಕಥೆಯಾಗಿದ್ದು, ಇದರ ಜೊತೆ ಹಾರರ್ ಕಥೆಯನ್ನ ಲವ್ ಸೆಂಟಿಮೆಂಟ್ ಮೂಲಕ ಹೇಳಲು ಹೊರಟಿದೆ ಚಿತ್ರತಂಡ.ಟ್ರಿಗರ್ ಮತ್ತೆ ಮನೋರಥ ಚಿತ್ರದ ಸಂಗೀತ ನಿರ್ದೇಶಕರಾದ ಚಂದ್ರು ಓಬಯ್ಯ ಅವರು ಈ ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತಿದ್ದು, ನಾಯಕನಟನಾಗಿಯೂ ಸಹ ಕಾಣಿಸಿಕೊಳ್ಳುತಿದ್ದಾರೆ.
ಮನೋರಥದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಂದ್ರು ಒಬಯ್ಯ ಅವರು ಈ ಸಿನಿಮಾ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಎಂಟ್ರಿಯಾಗಿದ್ದಾರೆ.

ಮೂವೀಸ್ ಪೋರ್ಟ್ ನಿರ್ಮಾಣದ ಈ ಸಿನಿಮಾಕ್ಕೆ ಬಂಡವಾಳ ಹೂಡಿರೋ ಆನಂದ್ ಸಂಪಂಗಿಯವರು ಸಹ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ವ್ಯಕ್ತಿಯಾಗಿ ಮಿಂಚಲಿದ್ದಾರೆ. ಚಿತ್ರರಂಗದಲ್ಲಿ ಬಹಳಷ್ಟು ಕಾಲದಿಂದಲೂ ಕೆಲ್ಸ ಮಾಡ್ಕೊಂಡೆ ಬಂದಿದ್ದ ಆನಂದ್ ಅವರಿಗೆ, ಈ ಸಿನಿಮಾ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಅನುಭವವಾಗುತ್ತಿದೆ. ಆನಂದ್ ಮೂಲತಃ ಬ್ಯೂಸಿನೆಸ್ ಮ್ಯಾನ್ ಆಗಿದ್ದು, ತಮ್ಮದೇ ಆದ ಫ್ಲೆಕ್ಸ್ ಬ್ಯೂಸಿನೆಸ್ ಇದೆ. ಟ್ಯಾಟ್ಯೂ ಆರ್ಟಿಸ್ಟ್ ಸಹ ಆಗಿರೋ ಆನಂದ್ ಅವರಿಗೆ ಸಿನಿಮಾ ನಿರ್ಮಾಣ ಮಾಟೋದು ತಂದೆಯ ಕನಸಾಗಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.

ಚಿತ್ರದಲ್ಲಿ ನಾಯಕಿಯಾಗಿ ಚಂದನ ಸೇಗು ಅಭಿನಯಿಸುತಿದ್ದು, ಇದು ಇವರ ಎರಡನೇ ಸಿನಿಮಾ. ಮೊದಲನೇ ಸಿನಿಮಾ ರಮೇಶ್ ಸುರೇಶ್ ಶೂಟಿಂಗ್ ಸಹ ಚಿತ್ರೀಕರಣದ ತಯಾರಿಯಲ್ಲಿದೆ. ಚಂದನವರ ಪಾತ್ರ ತುಂಬಾನೇ ಬೋಲ್ಡ್ ಕ್ಯಾರೆಕ್ಟರ್ ಆಗಿದ್ದು, ರಗಡ್ ಲುಕ್ ನಲ್ಲಿ ಮಿಂಚಲಿದ್ದಾರೆ.

ಇನ್ನುಳಿದಂತೆ ಪಾತ್ರವರ್ಗದಲ್ಲಿ ಬಿರಾದರ್, ರಾಘು ರಾಮನಕೊಪ್ಪ, ಕರಿಸುಬ್ಬು, ಪಾವಗಡ ಮಂಜು, ವಿಕ್ಟರಿ ವಾಸು, ಉಗ್ರಮ್ ರವಿ ಹೀಗೆ ಸಾಕಷ್ಟು ಕಲಾವಿದರ ದಂಡೇ ತುಂಬಿದೆ. ಚಿತ್ರಕ್ಕೆ ಸಂಗೀತ ಸಹ ನಿರ್ದೇಶಕ ಚಂದ್ರು ಅವರೇ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರೀಕರಣ ಬೆಂಗಳೂರು ಸಕಲೇಶಪುರ ಚಿಕ್ಕಮಗಳೂರಲ್ಲಿ ನಡೆಯಲಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಸದ್ಯದಲ್ಲೇ ಶೂಟಿಂಗ್ ಗೆ ತೆರಳಲಿರೋ ಈ ಇಡೀ ಚಿತ್ರತಂಡಕ್ಕೆ ಶುಭಹಾರೈಕೆ

This Article Has 1 Comment
  1. Pingback: regression testing

Leave a Reply

Your email address will not be published. Required fields are marked *

Translate »
error: Content is protected !!