ಮಾ. 23ರಂದು ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್  ನಟನೆಯ ‘ಉಸ್ತಾದ್ ಭಗತ್ ಸಿಂಗ್’  ಸಿನಿಮಾ ಮಾರ್ಚ್ 23ರಂದು ಬಿಡುಗಡೆಯಾಗಲಿದೆ.

ಹರೀಶ್ ಶಂಕರ್ ನಿರ್ದೇಶನದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಾಯಕಿಯಾಗಿ ಕನ್ನಡ ನಟಿ ಶ್ರೀಲೀಲಾ ಅಭಿನಯಿಸಿದ್ದಾರೆ. ಕನ್ನಡದ ‘ಟಾಕ್ಸಿಕ್’ , ಹಿಂದಿಯ ‘ಧುರಂಧರ್ 2’ ಬಿಡುಗಡೆಯಾದ ನಾಲ್ಕು ದಿನಗಳ ಬಳಿಕ ಈ ಸಿನಿಮಾ ತೆರೆಗೆ ಬರುತ್ತಿದೆ.

ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಗಬ್ಬರ್ ಸಿಂಗ್’ ಪಾತ್ರದಿಂದ ಪ್ರೇರಣೆ ಪಡೆದು ಈ ಸಿನಿಮಾವನ್ನು ನಿರ್ದೇಶಿಸಲಾಗಿದೆ. ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಚಿತ್ರೀಕರಣ ಪವನ್ ಕಲ್ಯಾಣ್ ಡಿಸಿಎಂ ಆಗುವ ಮುಂಚೆಯೇ ಆರಂಭವಾಗಿತ್ತು. ಆದರೆ ಅವರು ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ   ಬಿಡುವು ಮಾಡಿಕೊಂಡು ಪವನ್ ಕಲ್ಯಾಣ್ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.  ವಿದೇಶಗಳಲ್ಲಿ ಹಾಡುಗಳ ಶೂಟಿಂಗ್  ನಡೆಸಲಾಗಿದೆ.

ಡಿಸಿಎಂ ಆದ ಬಳಿಕ ಬಿಡುಗಡೆ ಆದ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಸಾಧಾರಣ ಯಶಸ್ಸು ಗಳಿಸಿತು. ನಂತರ ಬಿಡುಗಡೆಯಾದ ‘ಓಜಿ’ ಸಿನಿಮಾ ಬ್ಲಾಕ್‌ಬಸ್ಟರ್ ಎನಿಸಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!