ಚಿತ್ರ : ಉಸಿರು
ನಿರ್ದೇಶನ : ಪನೇಮ್ ಪ್ರಭಾಕರ್
ನಿರ್ಮಾಣ : ಲಕ್ಷ್ಮೀ ಹರೀಶ್
ತಾರಾಗಣ : ತಿಲಕ್, ಪ್ರಿಯಾ ಹೆಗ್ಡೆ ಮೊದಲಾದವರು
ರೇಟಿಂಗ್ : 3.5
ಅದು ಮಡಿಕೇರಿಯ ಸ್ಟುವರ್ಟ್ ಪೊಲೀಸ್ ಸ್ಟೇಷನ್ . ಈ ಪೊಲೀಸ್ ಠಾಣೆಗೆ ಹೊಸದಾಗಿ ಎಂಟ್ರಿ ನೀಡುವ ಪೊಲೀಸ್ ಅಧಿಕಾರಿ ರಾಜೀವ ಮುತ್ತಣ್ಣ. ಆದರೆ ಪನಿಶ್ಮೆಂಟ್ ಟ್ರಾನ್ಸ್‌ಫರ್ ಆಗಿ ಬಂದ ಕಾರಣ ರಾಜೀವನಿಗೆ ವೃತ್ತಿಯಲ್ಲಿ ನಿರುತ್ಸಾಹ ಕಾಡುತ್ತದೆ. ಜತೆಗಿರುವ ಗರ್ಭಿಣಿ ಪತ್ನಿಯೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸುತ್ತಿರುತ್ತಾನೆ. ಆದರೆ ಸರಣಿ ಕೊಲೆಗಾರನೋರ್ವ ಗರ್ಭಿಣಿ ಮಹಿಳೆಯರ ಹಿಂದೆ ಬಿದ್ದ ಸತ್ಯ ಅರಿವಾದಾಗ ಈ ಬಗ್ಗೆ ಗಂಭೀರ ತನಿಖೆಗೆ ಮುಂದಾಗುತ್ತಾನೆ. ತನಿಖೆಯ ಆಳಕ್ಕೆ ಹೋದಂತೆ ತೆರೆದಿಡುವ ಕಥೆಗಳೇನು? ಮಾಸ್ಕ್ ಮ್ಯಾನ್ ಆಗಿ ತಿರುಗಾಡುತ್ತಿರುವ ನಿಜವಾದ ಕೊಲೆಗಾರ ಸಿಗುತ್ತಾನೆಯೇ ಎನ್ನುವುದು ಪ್ರಮುಖ ಅಂಶ.
ಈ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರವಾದ ಇದೆ. ತನ್ನ ತಾಯಿಯನ್ನು ಅತಿಯಾಗಿ ಪ್ರೀತಿಸುವ ಹುಡುಗನ ಕಥೆ ಅದು. ಅನಿವಾರ್ಯ ಕಾರಣಗಳಿಂದಾಗಿ ಬಾಲ್ಯದಲ್ಲೇ ಜೈಲು ಸೇರುವ ಹುಡುಗ ಸೂರ್ಯ ದಶಕದ ಬಳಿಕ ಹೊರಗಿನ ಬೆಳಕು ನೋಡುತ್ತಾನೆ. ಸೂರ್ಯ ಮತ್ತು ಪೊಲೀಸ್ ರಾಜೀವ್ ಎರಡು ಕೂಡ ಈ ಸಿನಿಮಾದ ಎರಡು ಕಣ್ಣುಗಳು.
ಪೊಲೀಸ್ ಅಧಿಕಾರಿ ರಾಜೀವ್ ಮುತ್ತಣ್ಣನಾಗಿ ತಿಲಕ್ ಎಂದಿನಂತೆ ಆಕರ್ಷಕ ನಟನೆ ನೀಡಿದ್ದಾರೆ. ತಿಲಕ್ ಗರ್ಭಿಣಿ ಪತ್ನಿಯಾಗಿ ಪ್ರಿಯಾ ಹೆಗ್ಡೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಮತ್ತೋರ್ವ ನಾಯಕ ಸೂರ್ಯನ ಪಾತ್ರವನ್ನು ನವನಟ ಸಂತೋಷ್ ನಾದಿವಾಡ ನಿರ್ವಹಿಸಿದ್ದಾರೆ. ಈ ಸಿನಿದಲ್ಲಿ ಸಾಕಷ್ಟು ಪಾತ್ರಗಳಿವೆ. ಅದರಲ್ಲೂ ಸೈಮನ್ , ರಾಕೆಟ್ ಹೆಸರಿನ ಎರಡು ಖಳ ಪಾತ್ರಗಳು ಭಯಾನಕವಾಗಿವೆ. ಚಿತ್ರದ ಹಿನ್ನೆಲೆ ಸಂಗೀತ ಮನಮೋಹಕವಾಗಿದೆ. ಹಾಡುಗಳ ಸಂಗೀತ ಮತ್ತು ಕೊರಿಯೋಗ್ರಫಿ ಮಾಡಿರುವ ರೀತಿ ಗಮನಾರ್ಹವಾಗಿದೆ. ಮಾಸ್ ಮಾದ ಆ್ಯಕ್ಷನ್ ದೃಶ್ಯಗಳು ಮತ್ತು ಅವುಗಳನ್ನು ಚಿತ್ರೀಕರಿಸಿರುವ ರೀತಿ ಪ್ರೇಕ್ಷಕರ ಚಪ್ಪಾಳೆ ಪಡೆಯುತ್ತವೆ. ಕೊನೆಯಲ್ಲಿ ಹೊಸದೊಂಸು ಟ್ವಿಸ್ಟ್ ಇರಿಸಿ ಎರಡನೇ ಭಾಗ ಬರುವ ಸೂಚನೆಯನ್ನೂ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಉಸಿರು ಚಿತ್ರ ಕನ್ನಡ ಪ್ರೇಕ್ಷಕರು ಮಿಸ್ ಮಾಡದೇ ನೋಡಬಹುದಾಗಿದೆ.





Be the first to comment