ರಾಜೀವ್ ಅಭಿನಯದ ‘ಉಸಿರೇ ಉಸಿರೇ’ ಚಿತ್ರದ ‘ಮೊದಲ ಸಲ’ ಎಂಬ ಮೆಲೋಡಿ ಹಾಡು ಮೇ 13ಕ್ಕೆ ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ.
ಕಳೆದ ವಾರ ಬಿಡುಗಡೆಯಾಗಿ ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಉಸಿರೇ ಉಸಿರೇ’ ಚಿತ್ರದ ಮೆಲೋಡಿ ಹಾಡು ರಿಲೀಸ್ ಕುರಿತಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ.
ಸಿಎಂ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ರಾಜೀವ್ ಅನು ಮತ್ತು ಸೃಜಿತ ಗೋಷ್ ಸೇರಿದಂತೆ ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಧು ಕೋಕಿಲ, ದೇವರಾಜ್, ಅಲಿ, ಭ್ರಮಾನಂದಂ, ಮಂಜು ಪಾವಗಡ, ಜಗಪ್ಪ, ಸುಶ್ಮಿತಾ, ಸೀತಾ ರಾಮು, ನಿಕ್ಕಿ ಮಂಜು, ವಿಜಯ್ ಪ್ರೀತಂ ಬಣ್ಣ ಹಚ್ಚಿದ್ದಾರೆ.
ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದು, ಗೊಂಬೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನವಿದೆ.
ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
—
Post Views:
126
Be the first to comment