ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಉಪೇಂದ್ರ’ ಸಿನಿಮಾ ಇಂದು ರೀ-ರಿಲೀಸ್ ಆಗಿದೆ. ಉಪೇಂದ್ರ ಥಿಯೇಟರ್‌ನಲ್ಲಿ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ!
ಉಪೇಂದ್ರ ಥಿಯೇಟರ್ ಗೆ ಬರ್ತಾರೆ ಅನ್ನೋ ಕಲ್ಪನೆಯೂ ಇಲ್ಲದೆ ಸಿನಿಮಾ ನೋಡುತ್ತಿದ್ದ ಅಭಿಮಾನಿಗಳಿಗೆ ಉಪೇಂದ್ರ ಸರ್ಫ್ರೈಸ್ ನೀಡಿದ್ದಾರೆ. ಉಪೇಂದ್ರ ಬೆಳಗ್ಗೆ 6 ಗಂಟೆಗೆ ಹೋಗಿ ಶೋ ವೀಕ್ಷಿಸಿದ್ದಾರೆ.
ಉಪೇಂದ್ರ ಸಿನಿಮಾ ಬೆಂಗಳೂರಿನ ನರ್ತ್‌ಕಿ ಥಿಯೇಟರ್‌ನಲ್ಲಿ ರೀ-ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಗೇ ಒಂದು ಶೋ ಇಡಲಾಗಿದೆ. ಹಾಗಾಗಿ ಉಪ್ಪಿ ಬೆಳಗ್ಗೇನೆ ಥಿಯೇಟರ್‌ಗೆ ಬಂದಿದ್ದಾರೆ.
ಸಿನಿಮಾಗಳು ರೀ-ರಿಲೀಸ್ ಆದಾಗ ನಾಯಕರು ಥಿಯೇಟರ್‌ಗೆ ಬರೋದು ಕಡಿಮೇನೆ. ಆದರೆ ಉಪ್ಪಿ ಅದನ್ನು ಸುಳ್ಳು ಮಾಡಿದ್ದಾರೆ. ತಮ್ಮ ಚಿತ್ರವನ್ನು ಮೊದಲ ರಿಲೀಸ್ ತರವೇ ಸಂಭ್ರಮಿಸಿದ್ದಾರೆ. 25 ವರ್ಷದ ಬಳಿಕ ಬಂದ ಚಿತ್ರವನ್ನು ಮತ್ತೊಮ್ಮೆ ಥಿಯೇಟರ್‌ನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ.
ವೀರೇಶ್ ಥಿಯೇಟರ್‌ನಲ್ಲೂ ಉಪೇಂದ್ರ ಸಿನಿಮಾ ತೆರೆ ಕಂಡಿದೆ.
ಉಪೇಂದ್ರ ಚಿತ್ರ ಅಕ್ಟೋಬರ್-22, 1999 ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಂದು 25 ವರ್ಷಗಳ ಕಳೆದಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದರು. ಪ್ರೇಮಾ, ದಾಮಿನಿ, ರವೀನಾ ಟಂಡನ್ ಮೂವರ ಜೊತೆಗೆ ಉಪ್ಪಿ ಅಭಿನಯಿಸಿದ್ದರು. ಗುರುಕಿರಣ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು. ಎ.ವಿ.ಕೃಷ್ಣ ಕುಮಾರ್ ಕ್ಯಾಮರಾವರ್ಕ್ ಮಾಡಿದ್ದರು. ಶಿಲ್ಪಾ ಶ್ರೀನಿವಾಸ್ ಚಿತ್ರ ನಿರ್ಮಾಣ ಮಾಡಿದ್ದರು.
Be the first to comment