Upendra

ಉಪೇಂದ್ರ ಹೊಸ ಸಿನಿಮಾ ಶುರು

ಉಪೇಂದ್ರ ನಟನೆಯ ಹೊಸ ಕನ್ನಡ ಸಿನಿಮಾ ‘ಭಾರ್ಗವ’  ಸದ್ದಿಲ್ಲದೆ ಸೆಟ್ಟೇರಿದೆ. ಹಿರಿಯ ನಿರ್ದೇಶಕ ನಾಗಣ್ಣ ‘ಭಾರ್ಗವ’  ನಿರ್ದೇಶಿಸುತ್ತಿದ್ದಾರೆ.

ಹಲಸೂರಿನ ಸೋಮನಾಥೇಶ್ವರ ದೇವಾಲಯದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ಮಾಡಲಾಗಿದೆ. ‘ದಿ ವೈಲೆಂಟ್ ಫ್ಯಾಮಿಲಿ ಮ್ಯಾನ್’ ಎಂಬುದು ಸಿನಿಮಾದ ಟೈಟಲ್​  ಅಡಿಬರಹ. ಇದೊಂದು ಪಕ್ಕಾ ಮಾಸ್ ಸಿನಿಮಾ ಆಗಿದ್ದು, ಮಾಸ್ ಅಂಶದ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸಹ ಇರಲಿದೆ.

ಕಿರುತೆರೆ ನಟಿ  ಅಂಕಿತಾ ಅಮರ್  ಈ ಸಿನಿಮಾನಲ್ಲಿ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅವಿನಾಶ್  ಸಿನಿಮಾದಲ್ಲಿದ್ದಾರೆ. ‘ವಿಷ್ಣುವರ್ಧನ’, ‘ಕೋಟಿಗೊಬ್ಬ 2’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಿಗೆ ಕೆಲಸ ಮಾಡಿರುವ ರಾಜರತ್ನಂ ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. ಅರ್ಜುನ್ ಜನ್ಯ  ಸಂಗೀತ ನೀಡಿದ್ದಾರೆ.

ಉಪ್ಪಿ-ನಾಗಣ್ಣ ಕಾಂಬಿನೇಷನ್​ನ ಈ ಹಿಂದಿನ ಸಿನಿಮಾಗಳು ರೀಮೇಕ್ ಸಿನಿಮಾಗಳಾಗಿದ್ದವು. ಆದರೆ ‘ಭಾರ್ಗವ’ ಸ್ವಮೇಕ್ ಸಿನಿಮಾ ಆಗಿರಲಿದೆ. ‘ಗೋಕರ್ಣ’, ‘ಗೌರಮ್ಮ’, ‘ಕುಟುಂಬ’, ‘ದುಬೈ ಬಾಬು’ ಸಿನಿಮಾಗಳನ್ನು ನಾಗಣ್ಣ ನಿರ್ದೇಶನ ಮಾಡಿದ್ದರು.

ಸಿನಿಮಾದ ಚಿತ್ರೀಕರಣ  23ನೇ ತಾರೀಖಿನಿಂದ ಪ್ರಾರಂಭ ಆಗುತ್ತಿದೆ. ಸಿನಿಮಾಕ್ಕಾಗಿ ಕಂಠೀರವ ಸ್ಟುಡಿಯೋನಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸೆಟ್​ನ ಜೊತೆಗೆ ಹೊರಾಂಗಣ ಚಿತ್ರೀಕರಣ  ಮಂಗಳೂರು ಮತ್ತು ರಾಜ್ಯದ  ಕೆಲವೆಡೆ  ನಡೆಯಲಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!