ಉಪ್ಪಿ ಹಿಂದೆ ಸರಿದಿದ್ದೇಕೆ ಗೋತ್ತಾ? ತೆರೆಗೆ ಬರದ ಚಿತ್ರಗಳು-PART -2
ಬಿಡುಗಡೆಯಾಗದೆ ದಿನ ಪತ್ರಿಕೆಯಲ್ಲಿ ತನ್ನ ಪೂಸ್ಟರ್ ಮೂಲಕ ಗಮನ ಸೆಳದು ಮತ್ತೆ ಸುದ್ದಿ ಆಗಲೇ ಇಲ್ಲ “ಕಲ್ಕಿ” ಚಿತ್ರ ಮುಂದೆ ಓದಿ….
ಹಲ್ಲು ಹುಬ್ಬು ವಿಧೂಷಕ ನಗು, ಡೊಳ್ಳು ಹೊಟ್ಟೆ, ಹಾಗೂ ತಲೆ ಮೇಲೆ ಗಾಂಧಿ ಟೋಪಿ,ಹೀಗೆ ರಾಜಕಾರಣಿ, ಗೆಟಪ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಂಡಿದ್ದರು. ಇನ್ನೂಂದು ಗೆಟಪ್ ಉರಿ ಮಿಸೆ ಕೊರಳಲ್ಲಿ ರುದ್ರಾಕ್ಷಿ ಮಣಿಗಳು ಖಾಕಿ ಬಟ್ಟೆ ಕೈಲಿ ಖಡ್ಗ. ಕೋಪದಿಂದ ಕೆಂಪು ಕಣ್ಣಿನಲ್ಲಿ ಸುಡುವಂತೆ ನೋಟ. ಇದು ಉಪೇಂದ್ರರ ಇನ್ನೊಂದು ಅವತಾರವಾಗಿತ್ತು.
ದಿನಪತ್ರಿಕೆಯಲ್ಲಿ ಸುಮಾರು 2007 ರಲ್ಲಿ ಶುಕ್ರವಾರದ ಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು . ಮುನಿರತ್ನ ಅವರು ನಿರ್ಮಾಪಕರು ಆದರೆ ಒಬ್ಬ ಖ್ಯಾತ ನಿರ್ದೇಶಕನನ್ನೆ ಆಯ್ಕೆ ಮಾಡಲಾಗಿತ್ತು. ರಾಜಕಾರಣಿಗಳ ನೈಜ ಜೀವನದಲ್ಲಿ ಚುನಾವಣಾ ಪ್ರಕ್ರೀಯೆ ಹೇಗಿರುತ್ತೆ ಹಾಗೂ ಅವರು ಚುನಾವಣಾಯಲ್ಲಿ ಗೆಲ್ಲಲು ಮಾಡುವ ತಂತ್ರವನ್ನು ಹೇಗೆ ಮಾಡುತ್ತಾರೆ. ಅದು ಬರಿ ಜನರ ಮುಂದೆ ದುಡ್ಡು ಜಾತಿಗಿಂತಲೂ ಮಿಗಿಲಾದ ನೈಜ ಕ್ರೀಯೇಯನ್ನು ತೋರಿಸಬೇಕಾಗಿತ್ತು. ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಇನ್ನಿತರ ಡಿಪಾರ್ಟ್ಮೆಂಟ್ ಗಳು ರಾಜಕೀಯದಲ್ಲಿ ಹೇಗೆ ಪರೊಕ್ಷವಾಗಿ ಪಾಲ್ಗೂಳುತ್ತಾರೆ ಎನ್ನುವುದು ಸಿನಿಮಾ ಕತೆಯಲ್ಲಿ ಅಳವಡಿಸಲಾಗಿತ್ತು. ಕಲ್ಕಿಯಾಗಿ ವಿಚಿತ್ರವಾದ ಪೋಲೀಸ್ ಆಗಿ ಉಪೇಂದ್ರರವರು ಕಾಣಿಸಿಕೊಳ್ಳುತ್ತಿದ್ದರು, ಈ ಕಲ್ಕಿ ಬಂದಿದ್ದರೆ ಗಬ್ಬರ್ ಸಿಂಗ್ ನಂತಹ ಸಿನಿಮಾಗಳು ಬರ್ತಾನೆ ಇರಲ್ಲಿಲ್ಲ ಯಾಕಂದರೆ ಅಷ್ಟೊಂದು ಲೋಕಲ್ ಹಾಗೂ ರಗಡ್ ಪಾತ್ರವಾಗಿತ್ತು. ನಿಜಕ್ಕೂ ಈ ಸಿನಿಮಾವನ್ನ ಉಪೇಂದ್ರರವರು ಕೈ ಬಿಡಬಾರದಾಗಿತ್ತು. ವಿಲನ್ ಅವ್ರೆ ಹೀರೋನು ಅವರೆ ಆಗಿದ್ದರು. ಸರಿ ಅದೇನೇ ಇದ್ದರು ಎಲ್ಲಾ ಅಂದುಕೊಂಡಂತೆ ನೆಡಿಯುತ್ತಿರುವಾಗ ಕಲ್ಕಿ ಚಿತ್ರದ ಖ್ಯಾತ ನಿರ್ದೇಶಕ ಕತೆಯ ಮೇಲೆ ಹಾಗೂ ನಿರ್ಮಾಪಕರ ಮೇಲೆ ಸಣ್ಣ ತಪ್ಪನ್ನು ಮಾಡಿ ಮುನಿರತ್ನರವರ ಕೋಪಕ್ಕೆ ಗುರಿಯಾಗುತ್ತಾರೆ. ಇದರ ಮಿಟಿಂಗ್ ಅನ್ನು ಸಂದೆಶ್ ಹೋಟೆಲ್ ಮೈಸೂರು ಅಲ್ಲಿ ನಿಯೋಜಿಸಿಲಾಗುತ್ತೆ. ಅಲ್ಲಿ ನಿರ್ದೇಶಕನೊಂದಿಗೆ ಉಪ್ಪಿ ಸರ್ ಮತ್ತು ಮುನಿರತ್ನ ಮಾತುಕತೆ ವಿಫಲವಾಗಿ ಅಲ್ಲಿಂದ ಆ ನಿರ್ದೇಶಕನು ಹೊರ ಹೋಗುತ್ತಾನೆ.
ತದನಂತರ ಆ ವ್ಯಕ್ತಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಲ್ಲ. ಅದೆ ವೇಳೆ ಆ ಹೋಟೆಲ್ ನಲ್ಲಿ ಹಠವಾದಿ ಸಿನಿಮಾ ಶೂಟಿಂಗ್ ಸಲುವಾಗಿ ರವಿಚಂದ್ರನ್ ಅವರು ಮುನಿ ಮತ್ತು ಉಪೇಂದ್ರರನ್ನ ಬೇಟಿ ಮಾಡಿ ಮುನಿಯವರಿಗೆ ಏನಯ್ಯಾ ಮುನಿ ಎಲ್ಲಾ ಸಿನಿಮಾಗು ನನ್ನ ಕೆರೆದು ಕ್ಲ್ಯಾಪ್ ಮಾಡಿಸಿದಿಯಾ ಇ ಸಿನಿಮಾಗೆ ಆಮಂತ್ರಣ ಪತ್ರಿಕೆ ಸಹ ಕಳಿಸಿಲ್ಲ ಬೇಕಾದಾಗ ಕರದೆ ಎಲ್ಲಾ ಆದಮೇಲೆ ಮೆರತು ಬಿಟ್ಯಾ ಅಂದು ಈ ಸಿನಿಮಾ ಆಗಲ್ಲ ಹೋಗಯ್ಯಾ ಅಂದರು ಆಗ ಉಪ್ಪಿ ಕೂಡ ಎದರು ಇದ್ದರು ಕೊನೆಗೆ ಆ ಸಿನಿಮಾ ಆಗಲೇ ಇಲ್ಲ. ನಿರ್ದೇಶಕನ ಅತೀರೆಖದಿಂದಲೊ ರವಿಚಂದ್ರನ್ ರವರ ಮಾತಿನಂತೆಲೊ ಗೋತ್ತಿಲ್ಲ ಇವತ್ತಿನವರಿಗೂ ಆ ಸಿನಿಮಾ ಪೇಪರಲ್ಲೆ ಕುಳಿತಿದೆ. ಸ್ವಲ್ಪ ದಿನ ಜಾತ್ರೆಯಲ್ಲಿ ಪೊಸ್ಟರ್ ಅಂಗಡಿಯಲ್ಲಿ ಆಗಿನ ಕಾಲಕ್ಕೆ ಇ ಗೆಟಪ್ ನಾ ಪೋಟಗಳು ಸಿಗ್ತಾ ಇತ್ತು ನಂತರ ವರುಷ ಕಳೆದಂತೆ ಅದರ ಕೊರಹು ಇಲ್ಲದಂತೆ ನಾಶವಾಗಿ ಹೋಯ್ತು. ಇದು ಕಲ್ಕಿ ಸಿನಿಮಾದ ಅಳಿದು ಹೋದ ಕತೆ.
ವಿಷಯ ಸಂಗ್ರಹ ಹಾಗೂ ಬರಹ:- ಸಿದ್ದು ವಜ್ರಪ್ಪ (ನಿರ್ದೇಶಕರು/ಬರಹಗಾರರು )
Pingback: devops outsourcing company
Pingback: Settings and themes of Code Geass