ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ #RAPO22 ಚಿತ್ರದಲ್ಲಿ ಉಪೇಂದ್ರ ಖಳನಾಯಕನಾಗಿ ತೊಡೆತಟ್ಟಲಿದ್ದಾರೆ ಎನ್ನಲಾಗುತ್ತಿದೆ.
ಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಉಪೇಂದ್ರ ಸಿನಿಮಾದಲ್ಲಿ ಸೂರ್ಯ ಕುಮಾರ್ ಎಂಬ ಪಾತ್ರ ಪ್ಲೇ ಮಾಡುತ್ತಿದ್ದಾರೆ. ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ಉಪೇಂದ್ರರನ್ನು ಸ್ವಾಗತ ಮಾಡಿದೆ. ಸಖತ್ ಸ್ಟೈಲೀಶ್ ಆಗಿ ಉಪ್ಪಿ ಕಾಣಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದಾರೆ. ಉಪ್ಪಿ ಸನ್ ಆಫ್ ಸತ್ಯಮೂರ್ತಿ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಭಾರ್ಗವ ಸಿನಿಮಾದಲ್ಲಿ ನಟಿಸುತ್ತಿರುವ ಅವರೀಗ ಮತ್ತೊಮ್ಮೆ ಟಾಲಿವುಡ್‌ನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಉಪೇಂದ್ರ ‘ಕೂಲಿ’ ಸಿನಿಮಾ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದಾರೆ. ಮೊದಲ ಬಾರಿಗೆ ರಜನಿಕಾಂತ್ ಜೊತೆ ಅವರು ನಟಿಸಿದ್ದಾರೆ. ಬಹುದೊಡ್ಡ ತಾರಾಬಳಗವಿರುವ ಈ ಚಿತ್ರ ಬಿಡುಗಡೆಗೆ ಮೊದಲೇ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಹಾಕುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
—-

Be the first to comment