ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ಉಪ್ಪಿ

ರಿಯಲ್  ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ  ಕೊನೆಯ ಶಾಟ್ ನ್ನು ಡಿಕೋಡ್ ಮಾಡಿ ಎಂದು ಸವಾಲೆಸೆದಿದ್ದಾರೆ.

ಕಾತುರದಿಂದ ಕಾಯುತ್ತಿದ್ದೇನೆ. ಯುಐ ಚಿತ್ರದ ಎಷ್ಟು ಸೀನ್‌ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನಿಸಿ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದುಪರಭಾಷೆಯಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕಾಯಕವೇ ಕೈಲಾಸ, ಕೆಲಸ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ಯುಐ ಸಿನಿಮಾದ ಮೂಲಕ  ಉಪ್ಪಿ ನೀಡಿದ್ದಾರೆ.

ಯುಐ’ ಚಿತ್ರ  ಫ್ಯೂಚರ್ ಫಿಲ್ಮ್,.ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ರೆಸ್ಪಾನ್ಸ್ ಬಂದಿದೆ.

ಉಪೇಂದ್ರ, ರೀಶ್ಮಾ ನಾಣಯ್ಯ, ಅಚ್ಚುತ್ ಕುಮಾರ್, ರವಿಶಂಕರ್, ಸಾಧುಕೋಕಿಲ ಇತರರು ಚಿತ್ರದಲ್ಲಿದ್ದಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!