ಏಕರೂಪದ ದರ

ಚಿತ್ರಮಂದಿರಗಳಿಗೆ ಏಕರೂಪದ ದರ ಜಾರಿ

ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡುವಂತೆ ಸರಕಾರ ಆದೇಶಿಸಿದೆ.

ಸರ್ಕಾರದ ಆದೇಶದ ಪ್ರಕಾರ ಸಿನಿಮಾ ಟಿಕೆಟ್ ಬೆಲೆ 200 ರೂಪಾಯಿ ಮೀರಬಾರದು ಎಂದು ಹೇಳಲಾಗಿದೆ. ಇದು ಕನ್ನಡ ಅಲ್ಲದೆ ಎಲ್ಲಾ ಭಾಷೆಯ ಸಿನಿಮಾಗಳಿಗೆ ಅನ್ವಯ ಆಗಲಿದೆ.

ಕನ್ನಡ ಚಿತ್ರಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಾರದೆ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಆದರೆ ರಾಜ್ಯದಲ್ಲಿ ಪರಭಾಷೆಯ ಸಿನಿಮಾಗಳು ಕೋಟಿ ರೂಪಾಯಿ ಬಾಚುತ್ತಿವೆ. ಈ ಕಾರಣದಿಂದ ಎಲ್ಲಾ ಭಾಷೆಗಳಿಗೂ ಏಕರೂಪದ ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ.

ಹಲವು ಪರಭಾಷೆಯ ಚಿತ್ರಗಳು ತಮ್ಮ ಪ್ರದರ್ಶನದ ಮೊದಲ ದಿನ ಹಾಗೂ ವಿಶೇಷ ಪ್ರದರ್ಶನಗಳ ಸಂದರ್ಭದಲ್ಲಿ ಟಿಕೆಟ್ ದರವನ್ನು ಸಾವಿರ ರೂಪಾಯಿಗಳು ಹೆಚ್ಚು ಮಾಡಿದ ಉದಾಹರಣೆಗಳು ಬಹಳ ಇದೆ. ಇದರಿಂದ ದುಬಾರಿ ಬೆಲೆ ನೀಡಿ ಪ್ರೇಕ್ಷಕರು ಸಿನಿಮಾ ನೋಡುವ ಜೊತೆಗೆ ಕನ್ನಡ ಚಿತ್ರಗಳಿಗೆ ಪ್ರದರ್ಶನಕ್ಕೆ ಸಿನಿಮಾ ಮಂದಿರಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕರೂಪದ ಟಿಕೆಟ್ ದರ ನಿಗದಿ ಮಾಡಿದ ಕಾರಣ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದೇ ಎಂದು ನಾವು ಕಾದು ನೋಡಬೇಕಿದೆ.

ನಿರೀಕ್ಷಿತ ಮಟ್ಟದಲ್ಲಿ ಕನ್ನಡ ಚಿತ್ರಗಳು ಓಡದೆ ಇರುವ ಜೊತೆಗೆ ಪರಭಾಷೆ ಚಿತ್ರಗಳ ಹಾವಳಿಯಿಂದ ಕನ್ನಡದ ಉತ್ತಮ ಚಿತ್ರಗಳ ಪ್ರದರ್ಶನಕ್ಕೂ ತೊಂದರೆ ಉಂಟಾಗುತ್ತಿದೆ. ಸರಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಯಾದರೆ ಚಿತ್ರಮಂದಿರಗಳ ಪ್ರದರ್ಶನದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟಿದೆ ಟಿಕೆಟ್ ದರ..?

  • ಆಂಧ್ರಪ್ರದೇಶ – 195
  • ತಮಿಳುನಾಡು – 196
  • ಕೇರಳ – 190
  • ತೆಲಂಗಾಣ – 190
  • ಕರ್ನಾಟಕ – 200
Be the first to comment

Leave a Reply

Your email address will not be published. Required fields are marked *

Translate »
error: Content is protected !!