ಕೋಮಲ್ ನಟಸಿರುವ ಹೊಸ ಸಿನಿಮಾ ಉಂಡೆನಾಮ ವನ್ನುಅಮೆರಿಕ, ಕೆನಡಾ, ಸಿಂಗಪುರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಚಿತ್ರ ಹಿಟ್ ಆಗಿದೆ ಎಂದು ಚಿತ್ರತಂಡ ಹೇಳಿಕೆ ನೀಡಿದೆ. ಸಿನಿಮಾ ಕಳೆದ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಚಿತ್ರತಂಡ ಸಿನಿಮಾವನ್ನು ತೆಲುಗು, ತಮಿಳು ಇನ್ನಿತರೆ ಭಾಷೆಗಳಿಗೆ ಡಬ್ ಮಾಡುವ ಅಥವಾ ರೀಮೇಕ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿರುವುದಾಗಿ ಹೇಳಿದೆ.
ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ. ಬಹಳ ಚೆನ್ನಾಗಿದೆ. ನಾವು ಸಿನಿಮಾವನ್ನು ಬಿಡುಗಡೆ ಮಾಡುವಾಗಲೆ ಸುಮಾರು 180-200 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಿದ್ದೆವು ಮುಂದಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಸ್ಕ್ರೀನ್ ಸಂಖ್ಯೆಯನ್ನು ಇನ್ನಷ್ಟು ಹೆಚ್ವಳವಾಗಲಿದೆ. ಕೊಚ್ಚಿ, ಚೆನ್ನೈ ನಗರಗಳಲ್ಲಿ ಮುಂದಿನ ವಾರ ಬಿಡುಗಡೆ ಮಾಡಲಿದ್ದೇವೆ. ಜೊತೆಗೆ ಅಮೆರಿಕ, ಕೆನಡ ಹಾಗೂ ಸಿಂಗಪುರಗಳಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ ಎಂದು ವಿತರಕ ಗಂಗಾಧರ್ ಹೇಳಿದ್ದಾರೆ.
ನಟ ಕೋಮಲ್ ಅವರು, ಸಿನಮಾದ ಕತೆ ಯೂನಿವರ್ಸಲ್ ಆದದ್ದು. ಸಿನಿಮಾವನ್ನು ಇತರೆ ಭಾಷೆಗಳಿಗೆ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಡಬ್ ಮಾಡುವುದಾ ಅಥವಾ ರೀಮೇಕ್ ಮಾಡುವುದಾ ಯೋಚಿಸುತ್ತಿದ್ದೇವೆ. ಡಬ್ ಹೇಗಿದ್ದರೂ ಆಗಿಯೇ ಆಗುತ್ತದೆ ಅದರ ಜೊತೆಗೆ ರೀಮೇಕ್ ಬೇರೆ ರಾಜ್ಯಗಳಕಲಾವಿದರನ್ನು ಇಟ್ಟುಕೊಂಡು ಮಾಡಿದರೆ ಚೆನ್ನಾಗಿ ಆಗುತ್ತದೆ ಎಂದಿದ್ದಾರೆ.
ಉಂಡೆನಾಮ ಸಿನಿಮಾವು ಕೋವಿಡ್ ಕುರಿತ ಕತೆಯನ್ನು ಹೊಂದಿದೆ. ಮೊದಲ ರಾತ್ರಿ ಮಾಡಿಕೊಳ್ಳಲು ಕಷ್ಟಪಡುತ್ತಿದ್ದ ಯುವಕನೊಬ್ಬ ಕೋವಿಡ್ ಲಾಕ್ಡೌನ್ನಿಂದ ಅನುಭವಿಸುವ ಸಮಸ್ಯೆಗಳ ಬಗೆಗಿನ ಸಿನಿಮಾ ಇದಾಗಿದೆ.
ಸಿನಿಮಾದಲ್ಲಿ ಕೋಮಲ್ ಜೊತೆಗೆ ಹರೀಶ್ರಾಜ್, ತಬಲಾ ನಾಣಿ, ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ. ಸಿನಿಮಾಕ್ಕೆ ಧನ್ಯಾ ಬಾಲಕೃಷ್ಣ ಹಾಗೂ ತನಿಷಾ ಕುಪ್ಪಂಡ ನಾಯಕಿಯರು.
ಮೊದಲಿಗೆ ಈ ಸಿನಿಮಾದ ಹೆಸರು 2020 ಎಂದಿತ್ತು, ಆದರೆ ಚಿತ್ರೀಕರಣದ ಹಂತದಲ್ಲಿ ಸಿನಿಮಾದ ಹೆಸರನ್ನು ಉಂಡೆನಾಮ ಎಂದು ಬದಲಾಯಿಸಲಾಯಿತು.
—
Be the first to comment