ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ ಸಿನಿಮಾ ಡಿಸೆಂಬರ್ 20 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಟ್ವಿಟರ್ ಮೂಲಕ ಉಪ್ಪಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ” ಹೀಗೆ ಹೇಳಿ ಗಮನ ಸೆಳೆದಿದ್ದಾರೆ.
9ವರ್ಷಗಳ ಬಳಿಕ ಉಪ್ಪಿ ಡೈರೆಕ್ಷನ್ ಮಾಡಿರೋ ಚಿತ್ರ ಬರ್ತಿದೆ. ಹಾಗಾಗಿಯೇ ನಿರೀಕ್ಷೆ ಜಾಸ್ತಿ ಇದೆ. ಉಪ್ಪಿ ಹಾಲಿವುಡ್‌ನ ಮಟ್ಟದಲ್ಲಿ ಯುಐ ಸಿನಿಮಾ ತಯಾರು ಮಾಡಿದ್ದಾರೆ ಅನ್ನೋ ಟಾಕ್ ಕೂಡ ಇದೆ.
‘ಉಪ್ಪಿ 2’ ಬಳಿಕ ಉಪೇಂದ್ರ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಹಾಡುಗಳಿಂದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿಧಿ ಸುಬ್ಬಯ್ಯ, ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಬಿಗ್ ಬಜೆಟ್ ಚಿತ್ರವಾಗಿದ್ದು, ಕೆ.ಪಿ.ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಬೃಹತ್ ಸೆಟ್‌ನಲ್ಲಿ ಹಾಡುಗಳ ಚಿತ್ರೀಕರಣ, ವಿಎಫ್‌ಎಕ್ಸ್ ಕೆಲಸಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿವೆ. ಹಂಗೇರಿಯಲ್ಲಿಅಜನೀಶ್ ಲೋಕನಾಥ್ ಮತ್ತು ತಂಡ 90 ಪೀಸ್ ರೆಕಾರ್ಡಿಂಗ್ ಮಾಡಿಕೊಂಡಿದೆ. ಬುಡಾಪೆಸ್ಟ್‌ನಲ್ಲಿ 90 ಸಂಗೀತಗಾರರು, 90 ಇನ್‌ಸ್ಟ್ರುಮೆಂಟ್ ಬಳಸಿ ರೆಕಾರ್ಡಿಂಗ್ ಮಾಡಲಾಗಿದೆ.
ಉಪೇಂದ್ರ ಅವರ ನಿರ್ದೇಶನ, ವಿಭಿನ್ನ ಕಥಾಹಂದರ, ಸಂಗೀತ ಹಾಗೂ ದೊಡ್ಡಮಟ್ಟದ ನಿರ್ಮಾಣ ಇರುವುದರಿಂದ ಯುಐ ಚಿತ್ರ ಕುತೂಹಲ ಹುಟ್ಟಿಸಿದೆ.
Be the first to comment