ಏಪ್ರಿಲ್‌ನಲ್ಲಿ ‘UI’ ತೆರೆಗೆ

ರಿಯಲ್‌ ಸ್ಟಾರ್‌ ಉಪೇಂದ್ರ ನಟಿಸಿ, ಆಕ್ಷನ್‌ ಕಟ್‌ ಹೇಳಿರುವ ‘UI’ ಸಿನಿಮಾ ಮಾರ್ಚ್‌ ಅಂತ್ಯಕ್ಕೆ ಅಥವಾ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.

ಚಿತ್ರದ ಟೀಸರ್‌ ಹಾಗೂ ‘ಚೀಪ್‌’ ಹಾಡಿನ ತುಣುಕು ಬಿಡುಗಡೆಗೊಳಿಸಿರುವ ಉಪೇಂದ್ರ, ಸೋಮವಾರ  ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.

‘ಟ್ರೋಲ್‌ ಆಗುತ್ತೆ..ಇದು ಟ್ರೋಲ್‌ ಆಗುತ್ತೆ…ಇನ್‌ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ. ಕೆಲ್ಸ ಇಲ್ದೋರಿಗೆ ಟೈಂಪಾಸ್‌ ಆಗುತ್ತೆ…’ ಎನ್ನುವ  ಹಾಡು  ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಾಡಿಗೆ ನರೇಶ್‌ ಕುಮಾರ್‌ ಎಚ್‌.ಎನ್‌ ಸಾಹಿತ್ಯವಿದ್ದು, ಐಶ್ವರ್ಯ ರಂಗರಾಜನ್‌, ಹರ್ಷಿಕಾ ದೇವನಾಥ್‌, ಬಿ.ಅಜನೀಶ್‌ ಲೋಕನಾಥ್‌ ಹಾಗೂ ಅನೂಪ್‌ ಭಂಡಾರಿ ಹಾಡಿದ್ದಾರೆ. ಶಿವಕುಮಾರ್‌ ಜೆ. ಕಲಾ ನಿರ್ದೇಶನದಲ್ಲಿ ಹಾಡು ಮೂಡಿ ಬಂದಿದೆ.

”ಹೀರೊನೊಂದಿಗೆ ಪ್ರೀತಿಯಲ್ಲಿ ಬಿದ್ದು ತನ್ನದೇ ಲೋಕದಲ್ಲಿರುವ ನಾಯಕಿಗೆ ಸೂಕ್ತವಾಗುವಂತೆ ಹಲವು ಟ್ರೋಲ್‌ಗಳನ್ನು ಬಳಸಿ ಈ ಹಾಡು ಮಾಡಲಾಗಿದೆ. ನಾನು ನರೇಶ್‌ ಜೊತೆಯಾಗಿ ಕೂತು ಈ ಹಾಡನ್ನು ಸಿದ್ಧಪಡಿಸಿದೆವು. ಪ್ರಸ್ತುತ ಇರುವ ಟ್ರೋಲ್‌ಗಳಿಂದಲೇ ಹಾಡು, ವಾಕ್ಯಗಳನ್ನು ತೆಗೆದು ಒಂದು ಕಥೆಯ ರೂಪದಲ್ಲಿ ಹಾಡು ಸಿದ್ಧಪಡಿಸಬೇಕಿತ್ತು. ಜನರೇ ಇಷ್ಟಪಟ್ಟಿರುವುದನ್ನು ಹಾಡಾಗಿ ಮಾಡಿದ್ದೇವೆ” ಎಂದಿದ್ದಾರೆ ಉಪೇಂದ್ರ.

‘ಚೀಪ್‌..’ಸಾಂಗ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸಿನಿಮಾವನ್ನು ಮಾರ್ಚ್‌ ಅಂತ್ಯಕ್ಕೆ ಅಥವಾ ಏಪ್ರಿಲ್‌ನಲ್ಲಿ ಬಿಡುಗಡೆಗೊಳಿಸಲಾಗುವುದು’ ಎಂದು ಉಪೇಂದ್ರ ತಿಳಿಸಿದ್ದಾರೆ.

ಲಹರಿ ಫಿಲಂಸ್ ಹಾಗೂ ವೀನಸ್‌ ಎಂಟರ್‌ಟೈನರ್ಸ್‌ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ‘UI’ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!