ಯುಐ

ಯುಐ ಅಕ್ಟೋಬರ್‌ನಲ್ಲಿ ತೆರೆಗೆ

ಸೂಪರ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಯುಐ ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ.

ಈ ಬಗ್ಗೆ ಹೊಸ ಪೋಸ್ಟರ್ ಜೊತೆ ತಿಂಗಳು ಘೋಷಣೆ ಮಾಡಿದ್ದರೂ ನಿರ್ದಿಷ್ಟ ದಿನಾಂಕ ಪ್ರಕಟಿಸದೇ ಚಿತ್ರತಂಡ ಮತ್ತೆ ಕುತೂಹಲ ಮೂಡಿಸಿದೆ.

ವಿಭಿನ್ನ ಕತೆ, ಚಿತ್ರಕಥೆ ಜೊತೆಗೆ ತಲೆಗೆ ಹುಳ ಬಿಡುವ ರೀತಿಯ ಪೋಸ್ಟರ್ ಗಳ ಮೂಲಕಗಮನ ಸೆಳೆಯುವ ಉಪೇಂದ್ರ ಹಲವು ವರ್ಷಗಳ ನಂತರ ಮತ್ತೆ ನಟನೆ ಮತ್ತು ನಿರ್ದೇಶನ ಮಾಡಿರುವ ಯುಐ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ವರ ಮಹಾಲಕ್ಷ್ಮಿ ದಿನ ಸಿಂಹಾಸನದ ಮೇಲೆ ಆಸೀನರಾಗಿ ಕೈಯಲ್ಲಿ ಖಡ್ಗ ಹಿಡಿದಿರುವ ಉಪೇಂದ್ರ ತಲೆಯ ಮೇಲೆ ವಿಚಿತ್ರ ಕೊಂಬುಗಳ ಕಿರೀಟ ಧರಿಸಿದ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ ನಲ್ಲಿ ಧ್ರುವ ಸರ್ಜಾ ನಟಿಸಿರುವ ಮಾರ್ಟಿನ್ ಚಿತ್ರ ಕೂಡ ಬಿಡುಗಡೆ ಆಗಲಿದೆ. ಈ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆಯೇ ಎಂಬ ಕುತೂಹಲ ಉಂಟಾಗಿದೆ.

ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರವನ್ನು ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತವಿದೆ. ಚಿತ್ರದ ವೈರಲ್ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.

ಯುಐ

Be the first to comment

Leave a Reply

Your email address will not be published. Required fields are marked *

Translate »
error: Content is protected !!