ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ್ದ ಯುಐ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ.
ಕಳೆದ ಡಿಸೆಂಬರ್ 20ರಂದು ಯುಐ ಚಿತ್ರ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿತ್ತು. ಐದು ತಿಂಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ ಯುಐ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
ಜೀ ಕನ್ನಡದಲ್ಲಿ ಯುಐ ಸಿನಿಮಾ ಪ್ರಸಾರವಾಗಲಿದೆ. ಯುಐ ಸಿನಿಮಾ ಆದಷ್ಟು ಬೇಗ ಪ್ರಸಾರ ಆಗುತ್ತದೆ. ನಿಮ್ಮ ಯುಐ ಸಿನಿಮಾ ಅತಿ ಶೀಘ್ರದಲ್ಲಿಯೇ ಜೀ ಕನ್ನಡದಲ್ಲಿ ಬರುತ್ತದೆ ಅಂತ ಪ್ರೋಮೋ ತಿಳಿಸಿದೆ.
ಯುಐ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ನಿಧಿ ಸುಬ್ಬಯ್ಯ, ಅಚ್ಯುತ್ ಕುಮಾರ್, ಪ್ರಶಾಂತ್ ಸಂಬರಗಿ, ಸಾಧು ಕೋಕಿಲ, ಆರ್ಮುಗಂ ರವಿಶಂಕರ್, ಮುರಳಿ ಶರ್ಮಾ, ಕಾಕ್ರೋಚ್ ಸುಧಿ ಮುಂತಾದವರು ತಾರಾಗಣದಲ್ಲಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ , ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ವೇಲು ತುಳಸಿ ರಾಮ್, ನವೀನ್ ಮನೋಹರನ್ ಸಹ ನಿರ್ಮಾಪಕರಾಗಿದ್ದಾರೆ.
ಆರಂಭದಿಂದ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿದ್ದ ಯುಐ ಸಿನಿಮಾ ತೆರೆಕಂಡ 5 ದಿನದಲ್ಲಿ ಬಿಗ್ ಸ್ಕ್ರೀನ್ ನಲ್ಲಿ ‘ ಮ್ಯಾಕ್ಸ್ ‘ ಹವಾ ಮುಂದೆ ಡಲ್ ಆಗಿತ್ತು.
—-

Be the first to comment