ಆಗಸ್ಟ್‌ 12 ರಂದು UI ಸಿನಿಮಾದ  ಬಿಗ್ ಅನೌನ್ಸ್‌ಮೆಂಟ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ UI ಸಿನಿಮಾದ ಬಿಗ್ ಅನೌನ್ಸ್‌ಮೆಂಟ್ ಗೆ ಆಗಸ್ಟ್‌-12ರ ಬೆಳಗ್ಗೆ 11ಕ್ಕೆ ಟೈಮ್ ಫಿಕ್ಸ್ ಆಗಿದೆ.

ಚಿತ್ರದ ಕುರಿತು ಬಿಗ್ ಅನೌನ್ಸ್‌ಮೆಂಟ್  ಅಧಿಕೃತವಾಗಿ ಕೊಡುತ್ತೇವೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.  ಈ ಚಿತ್ರದ ಹೆಚ್ಚಿನ ವಿಷಯ ಹೊರಗೆ ಬಂದಿಲ್ಲ. ರಿಲೀಸ್ ಡೇಟ್ ಕೂಡ ರಿವೀಲ್ ಆಗಿಲ್ಲ.  ರಿಲೀಸ್ ಡೇಟ್  ಹೊರ ಬರಬಹುದು ಅನ್ನೋ ಅಂದಾಜಿದೆ. 

ಉಪೇಂದ್ರ ತಮ್ಮ ಸಿನಿಮಾದ ಪೋಸ್ಟ್‌ ಇಟ್ಟುಕೊಂಡೇ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಕತ್ತಲು ಕತ್ತಲು ಟೀಸರ್ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.  ಹಂಗೇರಿಯಲ್ಲಿ  ಚಿತ್ರಕ್ಕೆ ಸಂಗೀತ ಮಾಡಿಸಿದ್ದಾರೆ. ಅಜನೀಶ್ ಲೋಕನಾಥ್  ಒಳ್ಳೆ ಸಂಗೀತ ಮಾಡಿದ್ದಾರೆ ಅನ್ನೋ ಭರವಸೆ ಮೂಡಿಸಿದ್ದಾರೆ. ರೀಷ್ಮಾ ನಾಣಯ್ಯ ಮೇಲೆ ಚಿತ್ರಿಸಿರೋ ‘ಟ್ರೋಲ್ ಆಗುತ್ತದೆ’ ಹಾಡು ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

100 ಕೋಟಿ ಬಜೆಟ್‌ನ UI ಚಿತ್ರ ಕನ್ನಡದ ಬಿಗ್ ಚಿತ್ರಗಳಲ್ಲಿಯೇ ಒಂದಾಗಿದೆ. ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್, ನಿಧಿ ಸುಬ್ಬಯ್ಯ  ಅಭಿನಯಿಸಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!