‘ಬಿಗ್ ಬಾಸ್’ ಶೋನಿಂದ ಹೊರ ಬಂದ ಬಳಿಕ ಉಗ್ರಂ ಮಂಜು ಅವರಿಗೆ ದೊಡ್ಡ ಬಜೆಟ್ ನ ಸಿನಿಮಾವೊಂದರಲ್ಲಿ ಆಫರ್ ಸಿಕ್ಕಿದೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಜಿಮ್ಮಿ’ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ ‘ಮ್ಯಾಂಗೋ ಪಚ್ಚ’ ಅವರ ಮೊದಲ ಸಿನಿಮಾ ಆಗಲಿದೆ.
ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ವಿವೇಕ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದೆ. 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ.
ಉಗ್ರಂ ಮಂಜು ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾದಲ್ಲಿ ಅವರಿಗೆ ಪಾಸಿಟಿವ್ ರೋಲ್ ಸಿಕ್ಕಿತ್ತು.

Be the first to comment