ಕನ್ನಡದ ಮನರಂಜನಾಕ್ಷೇತ್ರದಲ್ಲಿಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವಉದಯಟಿವಿಯು ಅಮೋಘ 25 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆಅಲ್ಲಾ, ಹೀರೋಗೊಸ್ಕರ ಅಳೊ ಹೀರೋಯಿನ್‍ಕಥೆಅಲ್ಲಾ, ಹೀರೋಯಿನ್‍ಗೆ ಕಷ್ಟ ಕೊಡೋಕಥೆಖಂಡಿತಾಅಲ್ಲಾ, ಇದುಒಬ್ಬದಿಟ್ಟ ಹುಡುಗಿಯಕಥೆ “ನಾಯಕಿ” ಇದೇಜೂನ್ 17ರಿಂದ ಸೋನವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆಉದಯಟಿವಿಯಲ್ಲಿ ಪ್ರಸಾರವಾಗಲಿದೆ.
ಈ ನಾಯಕಿ ಕಷ್ಟಗಳನ್ನು ಕೇವಲಎದರಿಸುವುದಲ್ಲ, ಹೆದರಿಸುವ ದಿಟ್ಟೆ. ಸೌಂದರ್ಯ ಎಂಬ ಬಡ ಹುಡುಗಿತನ್ನಕುಡುಕಅಪ್ಪನನ್ನ ಸಾಕಲು ಮತ್ತುತಮ್ಮನನ್ನು ಓದಿಸಲು ಪಡುವ ಕಷ್ಟಗಳ ಸುತ್ತಹೆಣೆದಕಥೆ. ಆದರೆ ನಾಯಕಿ ಮೂಲತಃ ಶ್ರೀಮಂತ ಕುಟುಂಬದವಳಾಗಿರುತ್ತಾಳೆ. ಸೂರ್ಯವರ್ಧನ್ ಎಂಬುವನು ಹಣಕ್ಕಾಗಿಆಕೆಯ ಹೆತ್ತವರನ್ನಕೊಂದುಅವರ ಸ್ವತ್ತನ್ನುತನ್ನದಾಗಿಸಿಕೊಂಡಿರುತ್ತಾನೆ.ಆದರೆ ಈ ವಿಷಯನಾಯಕಿ ಸೌಂದರ್ಯಳಿಗೆ ತಿಳಿದಿರುವುದಿಲ್ಲ. ವಿಚಿತ್ರವೆಂದರೆ ಸೌಂದರ್ಯಆತನಕಂಪನಿಯಲ್ಲಿಯೇ ಕೆಲಸ ಮಾಡುತ್ತಿರುತ್ತಾಳೆ. ಸೂರ್ಯವರ್ಧನನಿಗೆತಾನು ಆಳುತ್ತಿರುವ ಆಸ್ತಿಯ ಒಡತಿಜೀವಂತವಾಗಿರುವ ವಿಷಯ ತಿಳಿದು, ಅವಳನ್ನು ಹುಡುಕಿ ಸಾಯಿಸಲು ಹೊಂಚು ಹಾಕಿರುತ್ತಾನೆ.ಇತ್ತಅದೇ ಸಮಯಕ್ಕೆ ಸೌಂದರ್ಯಳಿಗೆ ಸೂರ್ಯವರ್ಧನ್ ಮಗ ಸಿದ್ಧಾರ್ಥ್ ನ ಮೇಲೆ ಪ್ರೀತಿಚಿಗುರಿರುತ್ತದೆ. ಸೂರ್ಯವರ್ಧನನಿಗೆತಾನು ಹುಡುಕುತ್ತಿರುವುದು ಸೌಂದರ್ಯಎಂದು ತಿಳಿಯುತ್ತಾ? ಸಿದ್ಧಾರ್ಥನಿಗೆ ತನ್ನಅಪ್ಪನ ನಿಜ ಮುಖ ಗೊತ್ತಾಗುತ್ತಾ? ಸೌಂದರ್ಯಾಳಿಗೆ ತನ್ನಹುಟ್ಟುರಹಸ್ಯ ತಿಳಿಯುತ್ತಾ? ಎಂಬ ಕುತೂಹಲವನ್ನುಇಟ್ಟುಕೊಂಡು ಬರುತ್ತಿರುವಧಾರಾವಾಹಿ “ನಾಯಕಿ”
ಕನ್ನಡಚಿತ್ರರಂಗದ ಹೆಸರಾಂತ ನಟಿ, ಕಿರುತೆರೆಯ ಪಾಪ್ಯುಲರ್‍ಅತ್ತೆ ಹೇಮಾಚೌಧÀರಿಕಿರುತೆರೆಗೆ ಮತ್ತೆ ಮರಳಿ ಬರುತ್ತಿದ್ದಾರೆ ಬಡ್ಡಿಎಣಿಸೋ ಬಂಗಾರಮ್ಮನಾಗಿ, “ನಾಯಕಿ” ಧಾರಾವಾಹಿಯ ಮೂಲಕ.ಇನ್ನುಉದಯಟಿವಿಯ“ಅವಳು”ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದಕಾವ್ಯ ನಾಯಕಿಯಲ್ಲಿ ಸೌಂದರ್ಯಳಾಗಿ ನಟಿಸುತ್ತಿದ್ದಾರೆ. ದೇಶದ ಮೇಲೆ ಪ್ರೀತಿ ಮತ್ತು ಮಾನವೀಯತೆಯ ಮೇಲೆ ಅತಿಯಾದ ನಂಬಿಕೆ ಇಟ್ಟು ಸಾಮಾಜಿಕ ಸೇವೆ ಮಾಡುತ್ತಿರುವಯುವಕ ಸಿದ್ಧಾರ್ಥ. ಹುಟ್ಟಲ್ಲಿ ಶ್ರೀಮಂತಿಕೆ ಇದ್ರು, ಎಲ್ಲರೂ ಸಮಾನರುಎಂದು ಭಾವಿಸಿ ಅನ್ಯಾಯಕ್ಕೆಧ್ವನಿ ಏರಿಸಿಅದಕ್ಕೆ ಪರಿಹಾರ ಹುಡುಕುವ ಪಾತ್ರಈತನದು. ಇಂಥಹ ಸಿದ್ಧಾರ್ಥನ ಪಾತ್ರದಲ್ಲಿಕಿರುತರೆಯಖ್ಯಾತ ನಟದೀಪಕ್ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡಚಿತ್ರರಂಗದ ಹೆಸರುವಾಸಿಯಾದ ನಟಿ ಹರಿಪ್ರೀಯ ಬ್ಯೂಸಿ ಶೆಡ್ಯೂಲ್‍ನಲ್ಲೂ “ನಾಯಕಿ” ಕಥೆಯನ್ನು ಕೇಳಿ ಸಂತಸದಿಂದ ಮೊದಲಬಾರಿಗೆ ಈ ಧಾರಾವಾಹಿಯ ಪ್ರಚಾರಕ್ಕೆ ಬಂದಿದ್ದಾರೆ. ಇವರು ಈ ಧಾರಾವಾಹಿಯ ಕೆಲವು ಪ್ರೋಮೋಗಲಲ್ಲಿ ಅಭಿನಯಿಸಿ ಮತ್ತು “ನಾಯಕಿ” ಧಾರಾವಾಹಿಯ ಪ್ರಚಾರಕ್ಕಾಗಿಉದಯಟಿವಿಯಜೊತೆ ಕೈ ಜೋಡಿಸಿದ್ದಾರೆ.
“ನಾಯಕಿ” ಧಾರಾವಾಹಿಯ ಶ್ರೀ ಅನಘ ಕ್ರಿಯೇಷನ್‍ಅಡಿಯಲ್ಲಿತಯಾರಾಗುತ್ತಿದ್ದು,ಶಶಿಧರ್ ಕೆ. ಆ್ಯಕ್ಷನ್‍ಕಟ್ ಹೇಳಲಿದ್ದಾರೆ. ಸಚಿನ್‍ಕ್ಯಾಮರಾ ಹಿಡಿಯುತ್ತಿದ್ದರೆ, ಕಲಾ ನಿರ್ದೇಶಕರಾಗಿ ಸತೀಶ್ ನಿರ್ವಹಿಸುತ್ತಿದ್ದಾರೆ. ವಿಶ್ವನಾಥ ಈ ಧಾರಾವಾಹಿಗೆ ಸಂಕಲನಕಾರರಾಗಿದ್ದಾರೆ.
ಕ್ಷಣಕ್ಷಣಕ್ಕೂರೋಚಕ ತಿರುವುಗಳು, ಪಂಚ್‍ಕೊಡೋ ಸಂಭಾಷಣೆ, ಸಸ್ಪೆನ್ಸ್‍ತುಂಬಿದಕಥೆ “ನಾಯಕಿ”,ಜೂನ್ 17 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
Be the first to comment