‘ಉದಯಪುರ ಫೈಲ್ಸ್’ ಬಿಡುಗಡೆಗೆ ತಡೆ

ಜುಲೈ 11 ರಂದು ತೆರೆಗೆ ಬರಲಿರುವ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣವನ್ನು ಆಧರಿಸಿದ ‘ಉದಯಪುರ ಫೈಲ್ಸ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.

ಮುಖ್ಯ ನ್ಯಾ. ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಅವರ ವಿಭಾಗೀಯ ಪೀಠ  ಅರ್ಜಿದಾರರು ತಮ್ಮ ದೂರುಗಳೊಂದಿಗೆ 2 ದಿನಗಳಲ್ಲಿ ಕೇಂದ್ರವನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ.  ಚಿತ್ರದ ಮೇಲೆ ಶಾಶ್ವತ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೆ  ಚಿತ್ರ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದೆ.

ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿ  ಅರ್ಜಿದಾರರು, ಚಿತ್ರದ ಬಿಡುಗಡೆಯು ನ್ಯಾಯಯುತ ವಿಚಾರಣೆಯ ಸಾಧ್ಯತೆಗಳಿಗೆ ಧಕ್ಕೆ ತರುತ್ತದೆ ಎಂದು ವಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಉದಯಪುರ ಮೂಲದ ದರ್ಜಿ ಕನ್ಹಯ್ಯಾ ಲಾಲ್ ಅವರನ್ನು ಮೊಹಮ್ಮದ್ ರಿಯಾಜ್ ಮತ್ತು ಮೊಹಮ್ಮದ್ ಗೌಸ್ ಅವರು ಜೂನ್ 2022 ರಲ್ಲಿ ಕೊಲೆ ಮಾಡಿದ್ದರು. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದರ್ಜಿಯ ಅಂಗಡಿಯಲ್ಲಿ ಕೊಲೆ ಮಾಡಿದ ಭೀಕರ ವಿಡಿಯೋ ವೈರಲ್ ಆಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!