ಉದಯ ಟಿವಿಯಲ್ಲಿ ಸದಾ ನಿಮ್ಮೊಂದಿಗಿರಲಿದ್ದಾರೆ ಸೆಲೆಬ್ರೆಟಿಗಳು

ಉದಯ ಟಿವಿಯಲ್ಲಿ ಸದಾ ನಿಮ್ಮೊಂದಿಗಿರಲಿದ್ದಾರೆ ಸೆಲೆಬ್ರೆಟಿಗಳು.

ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ “ಸದಾ ನಿಮ್ಮೊಂದಿಗೆ” ಇದೇ ಭಾನುವಾರದಿಂದರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.  ಪ್ರತಿ ಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೆರಿಸಿ ಅವರಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು, ಆಟೋಓಡಿಸುವುದು,  ಗೋಲಿ ಸೋಡಾ ಮಾರುವುದು, ಸೊಪ್ಪು ಮಾರುವುದು ಪಾನಿ ಪುರಿ, ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‍ವುಡ್‍ತಾರೆಯರು.

“ಸದಾ ನಿಮ್ಮೊಂದಿಗೆ” ಯ ಮುಂಚುಣಿಯನ್ನು ಪಂಚಭಾಷಾತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ “ಜೂಲಿಲಕ್ಮೀ”ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿತಮ್ಮಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.

“ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆಆದರೆಯಾವುದೋ ಸಂದರ್ಭದಲ್ಲಿಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನುಕೊಡುವಅದ್ಭುತಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‍ವುಡ್‍ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹಕಾರ್ಯಕ್ರಮವನ್ನು ನಡೆಸಸುತ್ತಿರುವುದುಅಭಿನಂದನಾರ್ಹ” ಎಂದುಜುಲಿ ಲಕ್ಷ್ಮೀಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

“ಸದಾ ನಿಮ್ಮೊಂದಿಗೆ” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿಅದ್ಧೂರಿಯಾಗಿಎಂಟ್ರಿಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗಧ್ರುವ ಸರ್ಜಾ. ಇವರು ನರೇಂದ್ರಕುಮಾರ್ ಎಂಬ ಒಬ್ಬಆಟೋಡ್ರೈವರ್‍ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾಅವರು ನರೇಂದ್ರಕುಮಾರ್‍ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.

ಅಟೋಓಡಿಸುವ ಮೊದಲುಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್‍ಗರ್ಭಿಣಿಅವರನ್ನುಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‍ಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್‍ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆಆಟೋ ಹತ್ತಿದರು. ಹೀಗೆ ದಿನ ಪೂರ್ತಿಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲಕಡೆಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರಕುಮಾರ್‍ಅವರ ಸ್ವಂತಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶೋನಲ್ಲಿ ಪ್ರತಿ ವಾರವೂಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ,ಲವ್ಲಿ ಸ್ಟಾರ್ ಪ್ರೇಮ್, ಪ್ರೀಯಾಂಕಉಪೇಂದ್ರ, ಪಾರೂಲ್‍ಯಾದವ್, ವಿಜಯರಾಘವೇಂದ್ರ, ಸೃಜನ್ ಲೋಕೇಶ್, ಮಾನ್ವಿತಾ ಹರೀಶ್, ಪ್ರೀಯಾಮಣಿ, ರಶ್ಮೀಕಾ ಮಂದಣ್ಣ, ರ್ಧನಂಜಯ್,ಚಿರಂಜೀವಿ ಸರ್ಜಾ, ಹೀಗೆ ಇನ್ನೂಅನೇಕರು ಭಾಗವಹಿಸಿದ್ದಾರೆ.

ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ”ಲೋಕೇಶ್ ಪ್ರೊಡಕ್ಷನ್” ಸಂಸ್ಥೆಯಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಆರ್ಥಿಕದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆದೈರ್ಯತುಂಬುವ ಶಕ್ತಿ ನೀಡುವ, ಕಷ್ಟದಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯರೀಯಾಲಿಟಿಅಲ್ಲ್ಲರೀಯಲ್ ಶೋ “ಸದಾ ನಿಮ್ಮೊಂದಿಗೆ” ಪ್ರತಿ ಭಾನುವಾರ(15.7.2018) 9ಕ್ಕೆ ಪ್ರಸಾರವಾಗಲಿದೆ.

ಜುಲೈ 14ರಿಂದ “ಸವಾಲ್ ಗೆ ಸೈ”

25ನೇ ವರ್ಷದಲ್ಲಿಕಾಲಿಟ್ಟ ಉದಯ ಟಿವಿ ಕರುನಾಡ ಜನತೆಯ ಹೆಮ್ಮೆಯಚಾನಲ್. ಮನಸೂರೆಗೋಂಡ ಧಾರಾವಾಹಿಗಳನ್ನು ಮತ್ತು ಮನ ಮೆಚ್ಚುವ ರಿಯಾಲಿಟಿ ಶೋಗಳನ್ನು ಅಂದಿನಿಂದ ಇಂದಿನ ವರೆಗೆ ವೀಕ್ಷಕರ ಮಡಿಲಲ್ಲಿ ಹಾಕಿ ಸೈ ಎನಿಸಿಕೊಂಡ ಏಕೈಕ ಕನ್ನಡದ ಮೊದಲ ವಾಹಿನಿ ಎಂದು ಹೇಳಬಹುದು.
ಇತ್ತಿಚಗಷ್ಟೆ “ಮಾಯಾ” ಎಂಬ ವಿಭಿನ್ನರೀತಿಯಧಾರಾವಾಹಿಯನ್ನು ಬಿತ್ತರಿಸಿದ ಬೆನ್ನ ಹಿಂದೆ ಈಗ ಅಧ್ಬುತಕಾನ್ಸೆಪ್ಟ್‍ನೊಂದಿಗೆಎರಡುರೀಯಾಲಿಟಿ ಶೋವನ್ನು ವೀಕ್ಷಕರ ಮಡಲಿಗೆ ಹಾಕಲು ನಿರ್ಧರಿಸಿದೆ. ಎರಡೂಕೂಡಾ ಸೆಲೆಬ್ರಿಟಿಗಳಿಂದ ಕೂಡಿದಕಾರ್ಯಕ್ರಮವಾದರೂಒಂದು ಶೋ ಸೆಲಬ್ರಿಟಿಗಳಿಂದ ಮನರಂಜನೆಕೊಡುವ ಶೋ ಆದರೆ ಮತ್ತೊಂದು ಸೆಲಬ್ರಿಟಿಗಳಿಂದ ಸಮಾಜ ಕಳಕಳಿಯನ್ನು ಇಟ್ಟುಕೊಂಡಕಾರ್ಯಕ್ರಮ. ಇದೇಜುಲೈ 14ಕ್ಕೆ(ಶನಿವಾರ)”ಸವಾಲ್ ಗೆ ಸೈ” ಮತ್ತು 15ಕ್ಕೆ(ಭಾನುವಾರ)”ಸದಾ ನಿಮ್ಮೊಂದಿಗೆರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಮನರಂಜನೆಯೇ ಈ ಕಾರ್ಯಕ್ರಮದಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿತೆರೆಯಮೇಲೆಇದೊಂದು ಹೊಸ ರೀತಿಯ, ವಿನೂತನರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತುಕಿರುತೆರೆಯತಾರೆಯರದಂಡು ಭಾಗವಹಿಸಲಿದ್ದಾರೆ.  ಆಟದಲ್ಲಿಎರಡುತಂಡವಿದ್ದು, ಪ್ರತಿತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬುಕೊಡಲುತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತಇಲ್ಲಿಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲುತಾರೆಯರು ಬರುತ್ತಿರುವುದುಒಂದು ವಿಶೇಷ. ಹಿರಿಯರಿಂದಕಿರಿಯರವರೆಗೂ ಮನೆಮಂದಿಯೆಲ್ಲಾಕೂತು ನೋಡುವಂತ ಶೋ “ಸವಾಲ್ ಗೆ ಸೈ”.ಹಿರಿತೆರೆ ಮತ್ತುಕಿರುತೆರೆ, ಎರಡರಲ್ಲೂತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯರಾಂ, ಇದೇ ಮೊದಲ ಬಾರಿಗೆ “ಸಾವಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‍ದೇಶಪಾಂಡೆ ಸಹ ನಿರೂಪಕನಾಗಿಕಾರ್ಯ ವಹಿಸಲಿದ್ದಾರೆ.

ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿಜನಕ್ಕೆತಮ್ಮ ನೆಚ್ಚಿನತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದಆಗುವುದರಲ್ಲಿಅನುಮಾನವೇಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯಆಶಯ.

 

This Article Has 2 Comments
  1. Pingback: Hagerstown roofing contractor

  2. Pingback: 킹스포커

Leave a Reply

Your email address will not be published. Required fields are marked *

Translate »
error: Content is protected !!