ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನಕಥೆಯೊಂದನ್ನು ನಿಮ್ಮ ಮುಂದೆತರಲು ಸಜ್ಜಾಗಿದೆ. ಮಹಿಳೆ ಇಂದುಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ.ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದುಕಾರ್ಯಕ್ಷೇತ್ರದಲ್ಲೂಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹಾಗಾಗೀನೇ ಹೆಣ್ಣನ್ನುಕ್ಷಮೆಗೆ ಮತ್ತೊಂದು ಹೆಸರುಎನ್ನುತ್ತಾರೆ. ಭೂಮಿಗೆ ಮತ್ತೊಂದುರೂಪಎನ್ನುತ್ತಾರೆ. ಇಂತಹ ಭೂಮಿತೂಕದ ಹೆಣ್ಣಿನಕಥೆ“ಕ್ಷಮಾ”ಉದಯಟಿವಿಯಲ್ಲಿಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8ಕ್ಕೆ ಶುರುವಾಗಲಿದೆ.
ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿಅನುಭವಿಸುವ ಪರಿಪಾಟಲುಗಳು ಕಥೆಯ ಜೀವಾಳ. ಕ್ಷಮಾಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗತನ್ನ ಸಂಸಾರದಜವಾಬ್ದಾರಿಯನ್ನು ಹೊತ್ತ ವೀರಮಹಿಳೆ.
ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸಕೊಡುವಲ್ಲಿ ಸಫಲಳಾಗುತ್ತಾಳಾ? ಸಮಾಜಒಂಟಿ ಮಹಿಳೆಗೆ ಸೂರು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡತ್ತಾ? ಇಂತಹ ಸೂಕ್ಷ್ಮ ಎಳೆಯೊಂದಿಗೆ ಸಾಗುವ ಕಥೆಕ್ಷಮಾ.
ಧಾರಾವಾಹಿರಂಗದಲ್ಲಿ ಹತ್ತಾರು ಸೂಪರ್‍ಹಿಟ್‍ಧಾರಾವಾಹಿ ಕೊಟ್ಟಿರುವ ಭಾರತೀಶ್ ನಿರ್ದೇಶನ ಮತ್ತು ಮೀಡಿಯಾ ಹೌಸ್ ನಿರ್ಮಾಣಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿಕ್ಷಮಾ ಪಾತ್ರಧಾರಿಯಾಗಿ ಶ್ವೇತಾರಾವ್ ಮಾಡುತ್ತಿದ್ದುಇತರತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರುಇದ್ದಾರೆ.
“ಕ್ಷಮಾ” ಮಾರ್ಚ್ 4 ರಿಂದ ಸೋಮವಾರದಿಂದ ಶುಕ್ರವಾರರಾತ್ರಿ 8 ಗಂಟೆಗೆಉದಯಟಿವಿಯಲ್ಲಿ
Pingback: DevOps consulting
Pingback: used love dolls