“ಯೂ ಟರ್ನ್ -2 ” ಟ್ರೈಲರ್ ರಿಲೀಸ್

ಹಾರರ್, ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ “ಯೂ ಟರ್ನ್ -2 “ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ಇತ್ತೀಚಿಗೆ ಶಾಸಕ ಸತೀಶ್ ರೆಡ್ಡಿ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ, ಶ್ರೀನಿವಾಸ ರೆಡ್ಡಿ, ನಟ ಮಯೂರ್ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಚಿತ್ರಕ್ಕೆ ಶುಭ ಕೋರಿದರು.

ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಚಂದು ಓಬಯ್ಯ‌ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವುದರೊಂದಿಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ತಿಥಿ ಪೂಜಾ, ಸ್ನೇಹಾ ಭಟ್, ಮಂಜು ಪಾವಗಡ, ಚಿಲ್ಲರ್ ಮಂಜು, ಡಿಂಗ್ರಿ ನಾಗರಾಜ್ ಸೇರಿದಂತೆ ಅನೇಕ ಹಿರಿ ಕಿರಿಯ ಕಲಾವಿದರು ನಟಿಸಿದ್ದಾರೆ.

ಪಿಜ್ಜಾ ಡಿಲವರಿ ಹುಡುಗನೊಬ್ಬನ ಸುತ್ತ ನಡೆಯುವ ಹಾರರ್ ಕಥೆಯಿದು. ನಿರ್ಮಾಪಕ ಆನಂದ್ ಸಂಪಂಗಿ ಈ ಚಿತ್ರದಲ್ಲಿ ಖಳನಟನಾಗಿಯೂ ಕಾಣಿಸಿಕೊಂಡಿದ್ದಾರೆ.

ನಟ, ನಿರ್ದೇಶಕ ಚಂದು ಓಬಯ್ಯ ಅವರು, ವಿಶೇಷವಾಗಿ ಏನಾದರೂ ಮಾಡೋಣವೆಂದು ಒಳ್ಳೆಯ ತಂಡ ಕಟ್ಟಿಕೊಂಡು ಈ ಸಿನಿಮಾ ಮಾಡಿದ್ದೇವೆ. ನಾನು ಒಮ್ಮೆ ಚೆನ್ನೈಗೆ ಹೋಗಿದ್ದಾಗ ಅಲ್ಲಿ ಆದಂಥ ಅನುಭವ ಇಟ್ಟುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ ಎಂದರು.

ಹೊನ್ನಾವರ, ಬೆಂಗಳೂರು, ಬಿಡದಿಯಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಹಾರರ್ ಕಥೆಯ ಜೊತೆಗೊಂದು ಸಾಮಾಜಿಕ ಸಂದೇಶ ಈ ಚಿತ್ರದಲ್ಲಿದೆ. ಕಮರ್ಷಿಯಲ್ ಅಂಶಗಳೂ ಇವೆ. ಚಿತ್ರದ ಸೌಂಡ್ ವರ್ಕ್ ತುಂಬಾ ಚೆನ್ನಾಗಿದೆ. ನಾನು ನಾಯಕನಾಗುತ್ತೇನೆ ಅಂತ ಅಂದುಕೊಂಡಿದ್ದಿಲ್ಲ‌, ಹಳ್ಳಿಯಿಂದ ಹೊಟ್ಟೆ ಪಾಡಿಗೆಂದು ಬಂದವರು ನಾಯಕನಾಗಿದ್ದೇನೆ ಎಂದು ಹೇಳಿದರು.

ಯೂಟರ್ನ್ 2 ಸಿನಿಮಾ ಡಿಸೆಂಬರ್ 16ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.

ಅಶ್ರಿತ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಆನಂದ್ ಸಂಪಂಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!