ಯೂಟರ್ನ್ 2 ಡಿಸೆಂಬರ್ 16ಕ್ಕೆ ರಿಲೀಸ್

ಯೂಟರ್ನ್ 2 ಸಿನಿಮಾ ಡಿಸೆಂಬರ್ 16ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.

ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದೆ. ಇದು ಹಾರರ್ ಡ್ರಾಮಾ ಕಾಮಿಡಿ ಕಥಾಹಂದರ ಹೊಂದಿದೆ.

ಅಶ್ರಿತ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಆನಂದ್ ಸಂಪಂಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರವನ್ನು ಚಂದ್ರು ಓಬಯ್ಯ ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ಟೋರಿ ವಾಸು, ಪೂಜಾ, ಕರಿಸುಬ್ಬು, ಮಜಾಭಾರತದ ಮಂಜು, ರಾಘು ಕಿರಿಕ್ ಪಾರ್ಟಿ, ಉಗ್ರಂ ರವಿ ಸೇರಿದಂತೆ ಹಲವಾರು ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ.

ಈಗಾಗಲೇ ಬಹುತೇಕ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!