ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಕ್ಕೆ ಸಿಬಿಎಫ್ಸಿ ಯು/ಎ ಪ್ರಮಾಣ ಪತ್ರ ನೀಡಿದೆ.
ಸಿನಿಮಾದ ಕೆಲವು ದೃಶ್ಯ ಮತ್ತು ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ ಎನ್ನಲಾಗುತ್ತಿದೆ. ಕೆಲವು ಸಂಭಾಷಣೆಗಳು ಅಶ್ಲೀಲತೆಯನ್ನು ಒಳಗೊಂಡಿದ್ದವು. ಕೆಲವು ಸಂಭಾಷಣೆಗಳಿಗೆ ಮ್ಯೂಟ್ ಬಳಸುವಂತೆ ಸೂಚಿಸಲಾಗಿತ್ತು. ಚಿತ್ರತಂಡ ಸಂಭಾಷಣೆ,ಕೆಲವು ದೃಶ್ಯಗಳನ್ನು ಬದಲಾಯಿಸಿದೆ ಎನ್ನಲಾಗುತ್ತಿದೆ. ಯಾವುದೇ ಹೆಚ್ಚಿನ ಕಟ್ಗಳು ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಲಾಗಿದೆ.
‘ಪುಷ್ಪ 2’ ಸಿನಿಮಾದ ರನ್ಟೈಮ್ ‘ಅನಿಮಲ್’ ಸಿನಿಮಾದ ಅವಧಿಗಿಂತಲೂ ಉದ್ದ ಇದೆ. ‘ಅನಿಮಲ್’ ರನ್ಟೈಮ್ 3 ಗಂಟೆ 21 ನಿಮಿಷಗಳಿವೆ. ‘ಪುಷ್ಪ 2’ ಸಿನಿಮಾದ ಮೊದಲಾರ್ಧವೇ 1 ಗಂಟೆ 45 ನಿಮಿಷ ಇದೆ ಎನ್ನಲಾಗುತ್ತಿದೆ.
ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದ್ದು ಅಲ್ಲು ಅರ್ಜುನ್ ಬಿಹಾರದ ಪಟ್ನಾ, ಚೆನ್ನೈ ಮತ್ತು ಕೇರಳದ ಕೊಚ್ಚಿಗಳಲ್ಲಿ ಪ್ರೀ ರಿಲೀಸ್ ಇವೆಂಟ್ಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿಗೆ ಸಹ ಶೀಘ್ರದಲ್ಲೇ ಚಿತ್ರತಂಡ ಬರಲಿದ್ದು, ಬಳಿಕ ಮುಂಬೈನಲ್ಲಿ ಬೃಹತ್ ಶೋ ನಡೆಯಲಿದೆ.
‘ಪುಷ್ಪ 2’ ಡಿಸೆಂಬರ್ 5 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಇದಾಗಿದ್ದು, ಸಿನಿಮಾದ ಮೂರನೇ ಭಾಗ ಸಹ ಬರಲಿದೆ ಎನ್ನಾಲಾಗುತ್ತಿದೆ.
—-
Be the first to comment