ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಿಂದ ರಿಲೀಸ್ ಆಗುತ್ತಿರುವ ಎರಡು ಚಿತ್ರಗಳ ಟೀಸರ್ ಮಾರ್ಚ್ 13ರ ರಾತ್ರಿ ರಿಲೀಸ್ ಆಗಲಿದೆ.
ಅಲ್ಲದೇ ಈ ಟೀಸರ್ಗಳು ‘ಕೆಜಿಎಫ್ 2’ ಸಿನಿಮಾ ಜತೆ ಕೂಡಾ ಅಟ್ಯಾಚ್ ಆಗಿರಲಿವೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಇದರ ಜೊತೆಗೆ ಸಂತೋಷ್ ಆನಂದ್ರಾಮ್ ನಿರ್ದೇಶನ, ಜಗ್ಗೇಶ್ ಅಭಿನಯದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಟೀಸರ್ ಕೆಜಿಎಫ್ 2 ಸಿನಿಮಾದ ಜೊತೆಗೆ ಅಟ್ಯಾಚ್ ಆಗಿರಲಿದೆ.
ಮಾರ್ಚ್ 17ರಂದು ತೆರೆಗೆ ಬಂದ ‘ಜೇಮ್ಸ್’ ಸಿನಿಮಾದ ಜತೆಗೆ ‘ಬೈರಾಗಿ’ ಸಿನಿಮಾದ ಟೀಸರ್ ಪ್ರಸಾರಗೊಂಡಿತ್ತು. ಈಗ ‘ಕೆಜಿಎಫ್ 2’ ಜತೆಗೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರಾ’ ಹಾಗೂ ಸಂತೋಷ್ ಆನಂದ್ರಾಮ್ ನಿರ್ದೇಶನದ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಟೀಸರ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
‘ದಂತಕಥೆಯ ಮೊದಲ ಆಟ, ಕಾಂತಾರಾದ ಮೊದಲ ನೋಟ ರಾತ್ರಿ 10:44ಕ್ಕೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ’ ಎಂದು ಹೊಂಬಾಳೆ ಫಿಲ್ಮ್ಸ್ ಪೋಸ್ಟ್ ಮಾಡಿದೆ.
ಇನ್ನೊಂದು ಪೋಸ್ಟ್ ನಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಟೀಸರ್ ರಾತ್ರಿ 10.45ಕ್ಕೆ ‘ಅಸಹಾಯಕ ಹಯವಧನನ ಸ್ವಸಹಾಯ ಪದ್ಧತಿಯ ಅನಾವರಣ’ ಎನ್ನುವ ಕ್ಯಾಪ್ಶನ್ನೊಂದಿಗೆ ಪೋಸ್ಟರ್ ಪೋಸ್ಟ್ ಮಾಡಲಾಗಿದೆ.
___

Be the first to comment