ದರ್ಶನ್ ಅಭಿಮಾನಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ.
ಹಲ್ಲೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾಡಿರುವ D Company Fans Association, ‘ಪ್ರಥಮ್ ಮೇಲೆ ಹಲ್ಲೆ ಪ್ರಕರಣ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು. ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಕಾರಣ ಇಷ್ಟೇ ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು. ಬೆಳಕಿಗೆ ಬರುತ್ತದೆ ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ.
ನೀವು ನಿರ್ದೇಶಕರು ಅಲ್ಲವೇ ಸ್ವಾಮಿ ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ ? ನೀವು ಸಭ್ಯರು ತಾನೆ ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡ್ಡವಟಿಗೆ ಬಾಸ್ ಹೆಸರು ತಳುಕು ಯಾಕೆ? ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಎಂದು ಟ್ವೀಟ್ ಮಾಡಿದೆ.
ಇದಕ್ಕೆ ತಿರುಗೇಟು ನೀಡಿರುವ ನಟ ಪ್ರಥಮ್, ‘ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ! ನೀವೆಲ್ಲರೂ ನೀವು ಇಷ್ಟ ಪಡೋ ನಟರನ್ನ ಬೀದಿಗೆ ನಿಲ್ಲಿಸ್ತಾ ಇದೀರಾ! ನಾಳೆ ನೋಡ್ತೀರಿ ಏನಾಗುತ್ತೆ ಅಂತ! D company, fans pages ನಿಮ್ಗೇನೂ ಪ್ರಾಬ್ಲಮ್ ಇರಲ್ಲ ಆರಾಮಾಗಿರಿ! ನಾಳೆ ಏನೋ ಆಗುತ್ತೆ ಕಾಯ್ತಿರಿ (paid fansಗಳ) ನಿಮ್ಮ ಹೀರೋನ ನೀವೇ ಬೀದಿಗೆ ತರ್ತಾ ಇದೀರಾ! ಎಂದು ಟ್ವೀಟ್ ಮಾಡಿದ್ದಾರೆ.
‘ನೋಡ್ರಪ್ಪ ರಾಷ್ಟ್ರೀಯ ತನಿಖಾ ಸಂಸ್ಥೆ NIA, interpoleಗಿಂತಲೂ ದೊಡ್ಡ ತನಿಖಾ ಸಂಸ್ಥೆ ಈ ಬೇವರ್ಸಿಗಳ D company. ಥೂ ನಿನ್ third classಜನ್ಮಕ್ಕಿಷ್ಟು! ಚಿಪ್ಸು, ಪಪ್ಸು ತಿನ್ನೋಕೆ ರೌಡಿ ಹತ್ತಿರ ಹೋಗಿದ್ನಂತೆ ನಾನು. Enquiry ಮಾಡೋರಂತೆ, Education important. SP ನಿಮಗೆ ಅಧಿಕೃತ ಕಾರಣ ಏನಾಯ್ತು ಅಂತ ಹೇಳ್ತಾರೆ! ಕಾಯಿರಿ’ ಎಂದು ಉತ್ತರ ನೀಡಿದ್ದಾರೆ.
ಡಿ ಕಂಪನಿಗೆ ದುಬಾಕ್ ಕಂಪನಿ ಅಂತ ಉಲ್ಲೇಖಿಸಿರುವ ಪ್ರಥಮ್, ಚಿಪ್ಸು ಪಪ್ಸು ತಿನ್ನೋಕೆ ಹೋಗಿಲ್ರೋ. ದುಬಾಕ್ ಕಂಪನಿ ಅಂತ ಹೆಸರಿಟ್ಕೊಂಡಿರೋ ಪುಡಾಂಗ್ ಗಳು ಇವರು ಅಂತ ಮತ್ತೆ ಪ್ರಥಮ್ ಕೆಂಡ ಕಾರಿದ್ದಾರೆ. ನಿಮ್ಮ ವಿಷಯ ಟಾಯ್ಲೆಟಲ್ಲಿ ನಿಂತು ಮಾತಾಡ್ತಿನಿ’ ಎಂದು ದರ್ಶನ್ ಫ್ಯಾನ್ಸ್ ಪೋಸ್ಟ್ ಗೆ ಸೆಲ್ಫಿ ವಿಡಿಯೋ ಮಾಡಿ ಪ್ರಥಮ್ ಟಾಂಗ್ ಕೊಟ್ಟಿದ್ದಾರೆ.

—





Be the first to comment