ಏಕ್ ಲವ್ ಯಾ ಏಳುಮಳೆ ಹೀರೋ ರಾಣ ರಿಂದ ಟಿವಿ9 ಕನ್ನಡ ವಾಹಿನಿಯ ಲೈಫ್ ಸ್ಟೈಲ್ ,ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ 2025 ಉದ್ಘಾಟನೆಮಾಡಿದರು.
ಟಿವಿ9 ಕನ್ನಡ ವಾಹಿನಿಯಿಂದ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ 2025 ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಬೃಹತ್ ಮೇಳಕ್ಕೆ ಭರ್ಜಿರಿ ರೆಸ್ಪಾನ್ಸ್ ಪಡೆದುಕೊಂಡಿದ್ದೆ. ಇದರಲ್ಲಿ ಫ್ಯಾಶನ್ ಜಗತ್ತಿನ ದೊಡ್ಡ ಬ್ರ್ಯಾಂಡ್ಗಳು, ಹೊಚ್ಚ ಹೊಸ ಕಾರುಗಳು, ಆಕರ್ಷಕ ಪೀಠೋಕರಣಗಳು ಒಂದೇ ವೇದಿಕೆಯಲ್ಲಿ ಕಾಣಸಿದ್ದವು.
ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಿಂದ ಮತ್ತೊಂದು ಮೆಗಾ ಎಕ್ಸ್ಪೋ ಆಯೋಜನೆ ಮಾಡಿತ್ತು. ಅರಮನೆ ಮೈದಾನದಲ್ಲಿ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿದೆ. ಅಕ್ಟೋಬರ್ 2ರಿಂದ 5ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಈ ವರ್ಷ ನಡೆದ ಅತಿದೊಡ್ಡ ಮೇಳ.
ಹೊಸ ವಾಹನಗಳ ಅನ್ವೇಷಣೆಯಲ್ಲಿರುವವರಿಗೆ, ಹೋಮ್ ಡೆಕೋರೇಶನ್ ಆಸಕ್ತರಿಗೆ ಈ ಎಕ್ಸ್ಪೋ ದಿಂದ ಸರಿಯಾದ ವೇದಿಕೆಯಾಗಿತ್ತು. ಈ ಹಿಂದಿನ ಆವೃತ್ತಿಯ ಮೇಳಗಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಸಾಕಷ್ಟು ಜನರು ಎಕ್ಸ್ಪೋದ ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ಎಕ್ಸ್ಪೋದಲ್ಲಿ
ಎಲೆಕ್ಟ್ರಾನಿಕ್ ಗ್ಯಾಜೆಟ್: ಸ್ಮಾರ್ಟ್ ಹೋಮ್ ಟೆಕ್ನಾಲಜಿಯ ಇತ್ತೀಚಿನ ಉತ್ಪನ್ನಗಳು, ಅಡುಗೆಮನೆ ಪರಿಕರಗಳು, ಪರ್ಸನಲ್ ಗ್ಯಾಜೆಟ್ಗಳು ಮೊದಲಾದವನ್ನು ಈ ಎಕ್ಸ್ಪೋದಲ್ಲಿ ಕಾಣಿಸಿದವು. ಹಾಗೆಯೇ, ದೇಶದ ಅತ್ಯುತ್ತಮ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ಗಳ ಉತ್ಪನ್ನಗಳನ್ನು ಈ ಮೇಳದಲ್ಲಿಇದ್ದವು.
ಆಟೊಮೊಬೈಲ್ ಪೆವಿಲಿಯನ್: ಹೊಚ್ಚ ಹೊಸ ಬ್ರ್ಯಾಂಡ್ಗಳ ಎಲೆಕ್ಟ್ರಿಕ್ ವಾಹನಗಳು, ಎಸ್ಯುವಿ, ಬೈಕ್, ಸ್ಕೂಟರ್, ಕಾನ್ಸೆಪ್ಟ್ ಕಾರ್ ಇತ್ಯಾದಿಯ ಪ್ರದರ್ಶನವಿತ್ತು. ಟೆಸ್ಟ್ ರೈಡ್ ಮಾಡಿ ವಾಹನದ ಪ್ರತ್ಯಕ್ಷ ಅನುಭವ ಪಡೆಯಲಾಯಿತು.
ವಿಆರ್ ಮೂಲಕವೂ ವಾಹನದ ಡ್ರೈವಿಂಗ್ ಎಕ್ಸ್ಪೀರಿಯನ್ಸ್ ಪಡೆಯಬಹುದಾಗಿತ್ತು.
ಫರ್ನಿಚರ್ ಮತ್ತು ಹೋಮ್ ಡೆಕೋರೇಶನ್: ಆಕರ್ಷಕ ಹಾಗೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳು, ಇಂಟೀರಿಯರ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಸ್ ಮತ್ತಿತರ ಉತ್ಪನ್ನಗಳು ಈ ಟಿವಿ9 ಎಕ್ಸ್ಪೋದಲ್ಲಿ ನೋಡಲು ಸಿಗುತ್ತವೆ. ನಿಮ್ಮ ಮನೆ ಮತ್ತು ಮನಸ್ಸಿಗೆ ಹೊಂದಿಕೆಯಾಗುವ ಗೃಹಾಲಂಕಾರಗಳು ತುಂಬಿದ್ದವು.
ಫ್ಯಾಷನ್ ಮತ್ತು ಜ್ಯುವೆಲರಿ: ಹೊಚ್ಚ ಹೊಸ ಫ್ಯಾಷನ್ ಟ್ರೆಂಡ್ಗಳು, ಡಿಸೈನರ್ ಕಲೆಕ್ಷನ್ಸ್, ಟ್ರೆಂಡಿ ಡಿಸೈನ್ ಇರುವ ಜ್ಯುವೆಲರಿಗಳನ್ನು ಮೇಳದಲ್ಲಿ ಕಾಣಬಹುದು. 





Be the first to comment